ಮುಂಬೈ: ಮಸೀದಿಗಳ ಮುಂದೆ ಧ್ವನಿ ವರ್ಧಕಗಳನ್ನು ತೆಗೆಸದಿದ್ದರೆ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದು ಮಹಾರಾಷ್ಟ್ರದ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಮುಂಬೈನ ಘಾಟ್‌ಕೋಪರ್‌ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಧ್ವನಿವರ್ಧಕಗಳನ್ನು ಬಳಸುವ ಮಸೀದಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಧ್ವನಿವರ್ಧಕಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ
Advertisement
Advertisement
ನಾನು ಪ್ರಾರ್ಥನೆ ಮಾಡುವುದಕ್ಕೆ ವಿರೋಧಿಸುವುದಿಲ್ಲ. ನೀವು ನಿಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
Advertisement
ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಧ್ವನಿವರ್ಧಕಗಳನ್ನು ನಾವೇ ತೆಗೆದುಹಾಕಿ ಮಸೀದಿ ಮುಂದೆ ಹನುಮಾನ್ ಚಾಲೀಸ್ ಅನ್ನು ನುಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಎಚ್ಚರಿಕೆಯ ಬೆನ್ನಲ್ಲೇ ಘಾಟ್‌ಕೋಪರ್‌ನಲ್ಲಿ ಮಸೀದಿ ಹತ್ತಿರುವ ಇರುವ ಎಂಎನ್‌ಎಸ್ ಕಚೇರಿ ಮುಂದಿರುವ ಮರಕ್ಕೆ ಸ್ಪೀಕರ್ ಹಾಕಿ ಹನುಮಾನ್ ಚಾಲೀಸಾ ನುಡಿಸಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಸ್ಪೀಕರ್ ಹಾಕಿದ ಮಹೇಂದ್ರ ಭಾನುಶಾಲಿಯ್ನನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್
Advertisement
MNS leader Mahendra Bhanushali taken into police custody after playing ‘Hanuman Chalisa’ on loudspeakers without permission
“They’ve taken away my amplifier. But I’d like to say, in the coming times, ‘Jai Shree Ram’ will be played on loudspeakers,” he said pic.twitter.com/5xt3f7Hvgz
— ANI (@ANI) April 3, 2022
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಹೇಂದ್ರ ಭಾನುಶಾಲಿ, ರಾಜ್ ಠಾಕ್ರೆ ರಸ್ತೆಯಲ್ಲಿ ‘ಹನುಮಾನ್ ಚಾಲೀಸಾ’ ನುಡಿಸಲು ಆದೇಶಿಸಿದರು. ಈ ಆದೇಶಕ್ಕೆ ನಾನು ಬದ್ಧನಾಗಿರುತ್ತೇನೆ. ಪೊಲೀಸರು ಅನಧಿಕೃತ ಲೌಡ್ ಸ್ಪೀಕರ್ ತೆಗೆಯಿರಿ ಇದರಿಂದ ದ್ವೇಷ ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ಆದರೆ ಹಲವು ವರ್ಷಗಳಿಂದ ಮಸೀದಿಯಲ್ಲಿ ಅನಧಿಕೃತವಾಗಿ ಲೌಡ್‌ಸ್ಪೀಕರ್ ಹಾಕಲಾಗುತ್ತದೆ. ಆದರಿಂದ ದ್ವೇಷ ಬರುವುದಿಲ್ಲವೇ? ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಅನಧಿಕೃತವಾಗಿ ಲೌಡ್ ಸ್ಪೀಕರ್ ಅಳವಡಿಸಿದ್ದಕ್ಕೆ ಮುಂಬೈ ಪೊಲೀಸರು 5,050 ರೂ. ದಂಡವನ್ನು ಮಹೇಂದ್ರ ಭಾನುಶಾಲಿಗೆ ವಿಧಿಸಿದ್ದಾರೆ.