– ಎರಡನೇ ಬಾರಿ ಐಪಿಎಲ್ ಗೆದ್ದ ಆರ್‌ಸಿಬಿಗೆ ಡಿಕೆಶಿ ಅಭಿನಂದನೆ
ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯ (IPL Match) ಬೆಂಗಳೂರಿನಲ್ಲಿ (Bengaluru) ನಡೆಯಬೇಕಿತ್ತು. ಆದರೆ ಗುಜರಾತ್‌ನವರು (Gujarat) ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಆರೋಪಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯದಿರುವ ಕುರಿತು ಪ್ರತಿಕ್ರಿಯಿಸಿ, ಫೈನಲ್ ಪಂದ್ಯ ಕರ್ನಾಟಕದಲ್ಲಿ (Karnataka) ನಡೆಯಬೇಕಿತ್ತು. ಅದಕ್ಕೆ ನಾವು ಅನುಮತಿ ಕೂಡ ನೀಡಿದ್ದೆವು. ಆದರೆ ಗುಜರಾತ್‌ನವರು ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ. ಮುಂದೆ ಇಂತಹ ಪರಿಸ್ಥಿತಿ ಬರದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸ್ಟೇಡಿಯಂಗೆ ಅನ್ಯಾಯವಾಗಿದೆ. ನಮ್ಮ ಯುವಕರಿಗೂ ಅನ್ಯಾಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 19 ವರ್ಷ, 19 ಆವೃತ್ತಿ – ಆರ್‌ಸಿಬಿ ಸೋಲು-ಗೆಲುವಿನ ರೋಚಕ ಇತಿಹಾಸ!
Tonight, Bengaluru rises again as champions!
ಈ ಸಲವೂ ಕಪ್ ನಮ್ದೇ ⭐️⭐️
RCB has created history by clinching a second consecutive IPL title. With grit, composure, and the heart of true champions, the team has once again made Bengaluru proud.
Congratulations to the players,… pic.twitter.com/y2hgXT4m2l
— DK Shivakumar (@DKShivakumar) May 31, 2026
ಐಪಿಎಲ್ ಸೀಸನ್ 19ರ ಫೈನಲ್‌ನಲ್ಲಿ ಗೆದ್ದು ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡ ಆರ್‌ಸಿಬಿ (RCB) ತಂಡಕ್ಕೆ ಡಿ.ಕೆ. ಶಿವಕುಮಾರ್ ಅಭಿನಂದಿಸಿದರು. ಆರ್‌ಸಿಬಿ ಕರ್ನಾಟಕದ ಹೆಸರಿನಲ್ಲಿ ಆಡುತ್ತಿರುವ ತಂಡ. ನಮ್ಮ ರಾಜ್ಯದ ಆಟಗಾರರು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಅಭಿಮಾನಿಗಳ ಪರವಾಗಿ ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರುತ್ತೇನೆ. ಕರ್ನಾಟಕ ಹೆಮ್ಮೆಪಡುವಂತಹ ಸಾಧನೆಯನ್ನು ತಂಡ ಮಾಡಿದೆ ಎಂದು ಹೇಳುವ ಮೂಲಕ ಆರ್‌ಸಿಬಿ ಗೆಲುವನ್ನು ಹಾಡಿ ಹೊಗಳಿದ್ದಾರೆ.
ಬೆಂಗಳೂರಿನಲ್ಲಿ ಫೈನಲ್ ಯಾಕೆ ನಡೆಯಲಿಲ್ಲ?
ಐಪಿಎಲ್ ನಿಯಮದ ಪ್ರಕಾರ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡದ ತವರು ಮೈದಾನದಲ್ಲಿ ಮೊದಲ ಪ್ಲೇಆಫ್ ಹಾಗೂ ಫೈನಲ್ ಪಂದ್ಯ ಆಯೋಜಿಸುವ ಅವಕಾಶ ಇರುತ್ತದೆ. ಆದರೆ ಈ ಬಾರಿ ಬೆಂಗಳೂರಿಲ್ಲಿ ಫೈನಲ್ ಪಂದ್ಯ ನಡೆಯಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದ ಕೆಲವು ತಾಂತ್ರಿಕ ವೈಫಲ್ಯಗಳು ಹಾಗೂ ಶಾಸಕರಿಗೆ 10 ಸಾವಿರ ಟಿಕೆಟ್‌ಗಳನ್ನು ನೀಡುವಂತೆ ರಾಜ್ಯ ಸರ್ಕಾರ (State Govt) ಬಿಸಿಸಿಐಗೆ (BCCI) ಮನವಿ ಮಾಡಿದ್ದರಿಂದ ಪಂದ್ಯ ಅಹಮದಾಬಾದ್‌ಗೆ (Ahmedabad) ಶಿಫ್ಟ್ ಮಾಡಲಾಗಿದೆ ಎಂಬ ಉತ್ತರ ಬಿಸಿಸಿಐ ಕಡೆಯಿಂದ ಬಂದಿತ್ತು.ಇದನ್ನೂ ಓದಿ: ಮುಂದಿನ ಬಾರಿ RCB ತವರು ಮೈದಾನ ಯಾವುದು?
