– ಮಗ & ಭಾವಿ ಸೊಸೆ ಮದುವೆಯಾಗಿ ಸುಖವಾಗಿರಲಿ ಅಂತ ಬಯಸಿದ್ದ ಉದ್ಯಮಿ; ಆದ್ರೆ ನಡೆದಿದ್ದೇ ಬೇರೆ
ಮುಂಬೈ: ಪ್ರಿ-ವೆಡ್ಡಿಂಗ್ ಶೂಟ್‌ಗೆಂದು ಹೋಗಿ ಭಾವಿ ಪತ್ನಿಯಿಂದ ಹತ್ಯೆಗೀಡಾದ ಉದ್ಯಮಿಯ ಪುತ್ರನ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ನಮ್ಮ ಮನೆ ಸೊಸೆ ಆಗ್ತಾಳೆ ಅಂತ ಹಂತಕಿ ಖುಷಿಗಾಗಿ ಏನೆಲ್ಲ ವ್ಯವಸ್ಥೆ ಮಾಡಿದ್ದೆವೆಂಬ ವಿಚಾರವನ್ನು ಕೊಲೆಯಾದ ಕೇತನ್ ತಂದೆ ದುಃಖದಿಂದ ಹಂಚಿಕೊಂಡಿದ್ದಾರೆ.
ಕೊಲೆಗಾರ್ತಿ ಸಿಯಾ ಗೋಯಲ್ (Siya Goyal) ಹುಟ್ಟುಹಬ್ಬವನ್ನು ಮಹಾರಾಷ್ಟ್ರದ ಗಿರಿಧಾಮ ಮಹಾಬಲೇಶ್ವರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಸೆಲೆಬ್ರೇಟ್ ಮಾಡಲು ಕೊಲೆಯಾದ ಕೇತನ್ (Ketan Agarwal) ತಂದೆ ವಿಶಾಲ್ ಅಗರ್ವಾಲ್ ಯೋಜಿಸಿದ್ದರು. ಇದನ್ನೂ ಓದಿ: ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ; ಭಾವಿ ಪತಿಯನ್ನು ಕೊಂದ ಕಿರಾತಕಿ ಪ್ಲ್ಯಾನ್ ಹೇಗಿತ್ತು ಗೊತ್ತಾ?
ಫೈವ್‌ಸ್ಟಾರ್ ಹೋಟೆಲ್‌ನಲ್ಲಿ 70 ರೂಮ್ ಬುಕ್
ಕೇತನ್ ಮತ್ತು ಸಿಯಾ ಅವರ ಕುಟುಂಬ ಜೂನ್ 20 ರಂದು ಮಹಾಬಲೇಶ್ವರದಲ್ಲಿ ಆಕೆಯ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಲು ಯೋಜಿಸಿದ್ದರು. ಕೇತನ್ ಅವರ ತಂದೆ ಗಿರಿಧಾಮದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ 70 ಕೊಠಡಿಗಳನ್ನು ಬುಕ್ ಮಾಡಿದ್ದರು. ಆದರೆ, ಆರೋಪಿತೆ ಸಿಯಾ, ಕೇತನ್ ಜೊತೆ ಮಾತನಾಡಿ ಬರ್ತ್‌ಡೇ ಕಾರ್ಯಕ್ರಮ ರದ್ದುಗೊಳಿಸಿ ಪುಣೆ ಬಳಿಯ ಲೋಹಗಡ್ ಕೋಟೆಗೆ ಇಬ್ಬರೇ ಹೋಗೋಣ ಅಂತ ಮನವೊಲಿಸಿದ್ದಳು.
ಮಹಾರಾಷ್ಟ್ರದ ಪ್ರಮುಖ ಉದ್ಯಮಿಯೊಬ್ಬರ ಮಗ ಕೇತನ್ ಜೊತೆ ಫೆಬ್ರವರಿಯಲ್ಲಿ ಸಿಯಾ ಗೋಯಲ್ ನಿಶ್ಚಿತಾರ್ಥ ಆಗಿದ್ದಳು. ನವೆಂಬರ್‌ನಲ್ಲಿ ಅದ್ದೂರಿ ವಿವಾಹ ನಿಶ್ಚಯವಾಗಿತ್ತು. ಆದರೆ, ಜೂನ್ 18 ರಂದು ಸಿಯಾ ಜೊತೆ ಚಾರಣ ಮಾಡುವಾಗ ಕೇತನ್ ಕಮರಿಗೆ ಬಿದ್ದು ಲೋಹಗಡ್ ಕೋಟೆಯಲ್ಲಿ ಸಾವನ್ನಪ್ಪಿದರು. ಸಿಯಾ ಹೇಳಿಕೆಯ ಆಧಾರದ ಮೇಲೆ ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ನಂಬಲಾಗಿತ್ತು. ಆದರೆ, ತನಿಖೆಯಲ್ಲಿ ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ (22) ಸೇರಿಕೊಂಡು ಕೇತನ್‌ನನ್ನು ಕಮರಿಗೆ ತಳ್ಳಿ ಕೊಂದಿದ್ದಾರೆ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ ಕೇಸ್ – ಆರೋಪಿ ಜೋಡಿ 7 ದಿನ ಪೊಲೀಸ್ ಕಸ್ಟಡಿಗೆ
