Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಮಭಕ್ತರಿಗೆ ಮರೆಯಲಾಗದ ಗಿಫ್ಟ್‌ – ಉಚಿತ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾದ ಗುಜರಾತ್‌ ಕಲಾವಿದ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಾಮಭಕ್ತರಿಗೆ ಮರೆಯಲಾಗದ ಗಿಫ್ಟ್‌ – ಉಚಿತ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾದ ಗುಜರಾತ್‌ ಕಲಾವಿದ

Latest

ರಾಮಭಕ್ತರಿಗೆ ಮರೆಯಲಾಗದ ಗಿಫ್ಟ್‌ – ಉಚಿತ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾದ ಗುಜರಾತ್‌ ಕಲಾವಿದ

Public TV
Last updated: January 5, 2024 9:19 pm
Public TV
Share
3 Min Read
Ram
SHARE

ಅಯೋಧ್ಯೆ: ಶ್ರೀರಾಮಮಂದಿರ (Shri Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದೇಶ-ವಿದೇಶಗಳಿಂದ ಭಕ್ತರು ಹಲವು ರೀತಿಯಲ್ಲಿ ಉಡುಗೊರೆಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಆದ್ರೆ ಗುಜರಾತ್‌ನ (Gujarat) ನವಸಾರಿ ನಗರದ ಕಲಾವಿನೊಬ್ಬ ಸಾವಿರಾರು ರಾಮಭಕ್ತರಿಗೆ ಉಚಿತವಾಗಿ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗಿದ್ದಾನೆ.

ಕಲಾವಿದ (Gujarat Tattooist) ಜಯ್ ಸೋನಿ ‌ಗುಜರಾತ್‌ನಲ್ಲಿ ರಾಮನ ಭಕ್ತರಿಗೆ ಉಚಿತವಾಗಿ ಶ್ರೀರಾಮನ ಹೆಸರನ್ನು ಹಚ್ಚೆಹಾಕಲು ಮುಂದಾಗಿದ್ದಾನೆ. ಈಗಾಗಲೇ ಅಭಿಯಾನ ಶುರು ಮಾಡಿದ್ದು 200 ಭಕ್ತರ ಕೈಯಲ್ಲಿ ʻಶ್ರೀರಾಮʼನ ಹೆಸರನ್ನು ಹಚ್ಚೆಹಾಕಿದ್ದಾನೆ, ಇನ್ನೂ 700 ಮಂದಿಗೆ ಮುಂಗಡವಾಗಿ ಕಾಯ್ದಿರಿಸಿದ್ದಾನೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುವ ವೇಳೆಗೆ ಕನಿಷ್ಠ 1,000 ಮಂದಿಗೆ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆ ಸಲ್ಲಿಸಲು ಮುಂದಾಗಿದ್ದಾನೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

Ayodhya Ram Mandir 5

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದಾಗ ನನ್ನ ಕಡೆಯಿಂದ ಏನು ಸೇವೆ ಮಾಡಬಹುದೆಂದು ನಾನು ಯೋಚಿಸುತ್ತಿದ್ದೆ. ಟ್ಯಾಟೂ ಕಲಾವಿದನಾಗಿರುವುದರಿಂದ, ಭಕ್ತರಿಗೆ ಭಗವಾನ್ ಶ್ರೀರಾಮನ ಹೆಸರನ್ನೇ ಉಚಿತವಾಗಿ ಹಚ್ಚೆ ಹಾಕಬೇಕೆಂದು ನಿರ್ಧರಿಸಿದೆ ಎಂಬುದಾಗಿ ಕಲಾವಿದ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ – AI ಕಣ್ಗಾವಲು ಸಾಧ್ಯತೆ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕಾಲ ಸನ್ನಿಹಿತವಾಗಿದೆ. ದೇಶದೆಲ್ಲೆಡೆ ಶ್ರೀರಾಮನ ಸ್ಮರಣೆ, ಭಜನೆ ಕೇಳಿಬರುತ್ತಿದೆ. ಹಿಂದೂಗಳ ಮನೆ ಮನದಲ್ಲಿ ಸಂಭ್ರಮ ತುಂಬಿದೆ. ಇದೇ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠೆ ಕೂಡ ಜರುಗಲಿದೆ. ಈ ದಿನಕ್ಕಾಗಿ ಕೋಟ್ಯಂತರ ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಜ.22 ರ ಪ್ರಮುಖ ಧಾರ್ಮಿಕ ಆಚರಣೆ ಪ್ರಾಣ ಪ್ರತಿಷ್ಠೆ (Pran Pratistha). ಎಷ್ಟೋ ಜನಕ್ಕೆ ಪ್ರಾಣ ಪ್ರತಿಷ್ಠೆ ಬಗ್ಗೆ ಗೊತ್ತಿರುವುದಿಲ್ಲ. ಪ್ರಾಣ ಪ್ರತಿಷ್ಠೆ ಎಂದರೇನು? ಇದರಲ್ಲಿನ ಆಚರಣೆಗಳು ಹೇಗಿರುತ್ತವೆ? ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

AYODHYA

ಏನಿದು ಪ್ರಾಣ ಪ್ರತಿಷ್ಠೆ?
ಪ್ರಾಣ ಪ್ರತಿಷ್ಠೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದ ಪ್ರಮುಖ ಆಚರಣೆಯಾಗಿದೆ. ವಿಗ್ರಹವು ಕೇವಲ ದೇವರ ರೂಪವನ್ನು ಚಿತ್ರಿಸುವ ಒಂದು ಕಲಾಕೃತಿಯಷ್ಟೆ. ಪ್ರಾಣ ಪ್ರತಿಷ್ಠೆಯ ನಂತರವೇ ವಿಗ್ರಹವು ದೈವಿಕವಾಗುತ್ತದೆ. ಅದಕ್ಕಾಗಿ ವಿಗ್ರಹವನ್ನು ಪವಿತ್ರಗೊಳಿಸಿ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಪ್ರಾಣ ಎಂದರೆ ‘ಜೀವಶಕ್ತಿ, ಉಸಿರು, ಚೈತನ್ಯ’ ಮತ್ತು ಪ್ರತಿಷ್ಠೆ ಎಂದರೆ ‘ಸ್ಥಾಪನೆ’. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪೂಜಾ ವಿಧಾನ, ವೈದಿಕ ಸ್ತೋತ್ರಗಳ ಪಠಣ ನಡೆಸಲಾಗುವುದು. ಪ್ರಾಣ ಪ್ರತಿಷ್ಠೆ ಎಂದರೆ, ವಿಗ್ರಹಕ್ಕೆ ಜೀವಶಕ್ತಿ ತುಂಬಿ ದೈವಿಕವಾಗಿಸುವ ಆಚರಣೆ ಎನ್ನುತ್ತಾರೆ ಹಿರಿಯರು.

ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗೂ ಮೊದಲು ವಿಗ್ರಹದಲ್ಲಿ ದೈವಿಕ ಶಕ್ತಿ ಇರುವುದಿಲ್ಲ. ಪ್ರಾಣ ಪ್ರತಿಷ್ಠೆ ನಂತರವೇ ವಿಗ್ರಹಕ್ಕೆ ವಿಶೇಷ ಶಕ್ತಿ ಬರುತ್ತದೆ. ಬಳಿಕ ವಿಗ್ರಹವು ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಆಗ ದೇವಾಲಯಗಳಲ್ಲಿ ಭಕ್ತರು ವಿಗ್ರಹವನ್ನು ಪೂಜಿಸಬಹುದು ಎಂಬ ನಂಬಿಕೆಯಿದೆ.

ram temple ayodhya

ಆಚರಣೆ ಹೇಗಿರುತ್ತೆ?
ವಿಗ್ರಹವನ್ನು ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ತರುವುದರೊಂದಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಅಂದರೆ ವಿಗ್ರಹವನ್ನು ಹೊರಗಿನಿಂದ ಕೇಂದ್ರ ಸ್ಥಳಕ್ಕೆ ಸ್ಥಳಾಂತರಿಸುವುದು. ಅತಿಥಿಯನ್ನು ಸ್ವಾಗತಿಸುವಂತೆಯೇ ದೇವಾಲಯಕ್ಕೆ ದೇವರ ವಿಗ್ರಹವನ್ನು ತರಲಾಗುವುದು. ನಂತರ ವಿಗ್ರಹಕ್ಕೆ ಅಭಿಷೇಕ ಮಾಡಿಸಲಾಗುತ್ತದೆ. ನಂತರ ಸುಗಂಧ ದ್ರವ್ಯಗಳನ್ನು ಹಚ್ಚಲಾಗುತ್ತದೆ. ನಂತರ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಸರಿಯಾದ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪಿಸುತ್ತಾರೆ.

ಪುರೋಹಿತರು ಮಂತ್ರಗಳನ್ನು ಪಠಿಸುತ್ತಾರೆ. ಮಂತ್ರಗಳ ಪಠಣೆ, ಆಚರಣೆಯಿಂದ ವಿಗ್ರಹಕ್ಕೆ ದೈವಶಕ್ತಿ ಬರುತ್ತದೆ. ನಂತರ ವಿಗ್ರಹಕ್ಕೆ ಅಭಿಮುಖವಾಗಿ ಕನ್ನಡಿಯನ್ನು ಹಿಡಿಯಲಾಗುತ್ತದೆ. ಬಳಿಕ ವಿಗ್ರಹದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿಲಾಗುತ್ತದೆ. ಆಗ ಕನ್ನಡಿ ಒಡೆಯುತ್ತದೆ. ಕನ್ನಡಿ ಒಡೆಯುವುದು, ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಂಡಿದೆ ಎಂಬುದಕ್ಕೆ ಸಾಕ್ಷಿ. ಈ ಪ್ರಕ್ರಿಯೆ ಮುಗಿದ ನಂತರ ವಿಗ್ರಹವನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ. ವಿಗ್ರಹಕ್ಕೆ ಜೀವತುಂಬಿ ದೈವಿಕವಾಗಿಸುವ ಆಚರಣೆ ಇದು ಎಂದು ನಂಬಲಾಗಿದೆ.

Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

more than 40 electric poles have been broken due to wind and rain in athani
Belgaum

ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

Public TV
By Public TV
10 minutes ago
Donald Trump Angry
Latest

ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್‌ ನಾಶ್‌: ಟ್ರಂಪ್‌ ಎಚ್ಚರಿಕೆ

Public TV
By Public TV
11 minutes ago
Rinku Singh
Cricket

ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಗೆಲುವು ತಂದ ರಿಂಕು – ಸತತ ಸೋಲಿನ ಬಳಿಕ ಖಾತೆ ತೆರೆದ ಕೋಲ್ಕತ್ತಾ

Public TV
By Public TV
47 minutes ago
West Bengal Election PM Narendra Modi jhalmuri break in the middle of high octane Bengal campaign
Latest

ಇದ್ದಕ್ಕಿದ್ದಂತೆ ಕಾನ್ವಾಯ್‌ ನಿಲ್ಲಿಸಿ ರಸ್ತೆಯ ಬದಿ ಅಂಗಡಿಗೆ ತೆರಳಿ ಝಲ್ಮುರಿ ಸವಿದ ಮೋದಿ

Public TV
By Public TV
49 minutes ago
IPL 2026 Dhruv Jurel off balance and diving away from the stumps but hits the target
Cricket

IPL 2026 – ಧ್ರುವ್ ಜುರೆಲ್ ಕೈಚಳಕಕ್ಕೆ ಬೆಚ್ಚಿಬಿದ್ದ ಕ್ಯಾಮರೂನ್ ಗ್ರೀನ್!

Public TV
By Public TV
1 hour ago
HD Kumaraswamy 3
Latest

ಜೆಡಿಎಸ್‌ʼಗೆ ಜಮೀರ್‌ – ಗಾಳಿಸುದ್ದಿಗೆ ಕುಮಾರಸ್ವಾಮಿ ಸ್ಪಷ್ಟನೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?