Saturday, 16th February 2019

Recent News

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಬೆಂಗಳೂರು: ಬೆಳ್ಳಿತೆರೆ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ‘ನಾಗರಹಾವು’ ಚಿತ್ರ ರಿ-ರಿಲೀಸ್ ಆಗಲಿದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ರಿ-ರಿಲೀಸ್ ಆಗ್ತಿರೋ ಮೂಲಕ ಬೆಳ್ಳಿತೆರೆ ಮೇಲೆ ಮತ್ತೆ ರಾಮಾಚಾರಿಯ ದರ್ಶನವಾಗುತ್ತಿದೆ. ಇದೀಗ ಹೊಸ ಲುಕ್‍ನಲ್ಲಿ ಅಭಿಮಾನಿ ದೇವರುಗಳಿಗೆ ದರ್ಶನ ಕೊಡೋದಕ್ಕೆ ಸಜ್ಜಾಗಿದ್ದು, ವೆಲ್‍ಕಮ್ ಮಾಡಿಕೊಳ್ಳೋಕ್ಕೆ ಚಿತ್ರರಂಗ ಕೂಡ ತುದಿಗಾಲಲ್ಲಿ ನಿಂತಿದೆ.

ಚಂದನವನಕ್ಕೆ ಇಬ್ಬರು ದೊಡ್ಡ ನಟರನ್ನು ಕೊಟ್ಟ ನಾಗರಹಾವು ಎಂದೆಂದಿಗೂ ಎವರ್ ಗ್ರೀನ್ ಚಿತ್ರ. ಈ ಬಾರಿ ಬೆಳ್ಳಿತೆರೆ ಮೇಲೆ ಹೈ ಗ್ರೇಡ್ ಕಲರ್ ಫುಲ್ ರಾಮಾಚಾರಿಯನ್ನು ಎಲ್ಲರೂ ನೋಡಬಹುದಾಗಿದೆ.

7.1 ತಂತ್ರಜ್ಞಾನದಲ್ಲಿ ನಾಗರಹಾವನ್ನ ರೆಡಿ ಮಾಡಿದ್ದು, ಮ್ಯೂಸಿಕ್‍ನ ರಿ-ಕ್ರಿಯೇಟ್ ಮಾಡಲಾಗಿದೆ. ಡಿಜಿಟಲ್ ಸೌಂಡಿಂಗ್ ಎಫೆಕ್ಟ್ ನಲ್ಲಿ ಎದ್ದು ಬರುತ್ತದೆ. ಈಗಾಗಲೇ ರಿಲೀಸ್ ಆಗಿರುವ ನಾಗರಹಾವು ಟೀಸರ್ ಭಾರೀ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲ್‍ಚಲ್ ಎಬ್ಬಿಸಿದೆ.

ಇನ್ನೂ ವಿಶೇಷ ಅಂದ್ರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಮೂಡಿ ಬರ್ತಿರುವ ನಾಗರಹಾವು ಸಿನಿಮಾ ನೋಡೋದಕ್ಕೆ ಸಿನಿಪ್ರಿಯರು ಮಾತ್ರವಲ್ಲ ಸಿನಿಮಾ ಮಂದಿ ಕೂಡ ಕಾದು ಕುಳಿತಿದ್ದಾರೆ. ಹೊಸ ರಾಮಾಚಾರಿಯ ಬಗ್ಗೆ ಮಾತನಾಡೋದಕ್ಕೆ ಸ್ಯಾಂಡಲ್‍ವುಡ್‍ನ ಹಲವು ಗಣ್ಯರು ಆಗಮಿಸಿದ್ರು.

ಭಾರತಿ ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಅಂಬರೀಷ್, ಲೀಲಾವತಿ, ಜಯಂತಿ, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹೊಸ ನಾಗರಹಾವಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಗಳು ಆಗಿವೆ. ಜುಲೈ 20 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *