Saturday, 25th May 2019

Recent News

ಎರಡು ದಿನ ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ಮುಂದಿನ 48 ಗಂಟೆಗಳ ಕಾಲ ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

ದಿ ಇಂಟರ್‍ನೆಟ್ ಕಾರ್ಪೋರೇಷನ್ ಆಫ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (ಐಸಿಎಎನ್‍ಎನ್) ಮುಂದಿನ 48 ಗಂಟೆಗಳ ಕಾಲ ಇಂಟರ್‍ನೆಟ್ ಅಡ್ರೆಸ್ ಬುಕ್ ಅಥವಾ ಡೊಮೈನ್ ನೇಮ್ ಸಿಸ್ಟಮ್ (ಡಿಎನ್‍ಎಸ್) ಅನ್ನು ಕಾಪಾಡುವ ಕ್ರಿಪ್ಟೋಗ್ರಾಫಿಕ್ ಕೀಯನ್ನು ಬದಲಾಯಿಸುತ್ತಿದೆ. ಈ ಸಂದರ್ಭದಲ್ಲಿ ಸರ್ವರ್ ಡೌನ್ ಆಗಿ ನೆಟ್‍ವರ್ಕ್ ಸಮಸ್ಯೆ ಎದುರಾಗಲಿದೆ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ದಾಳಿಗೆ ಕಡಿವಾಣ ಹಾಕಿ ಹೆಚ್ಚಿನ ಭದ್ರತೆ ನೀಡಲು ಈ ಬದಲಾವಣೆ ಮಾಡಲಾಗುತ್ತಿದೆ.

ದಿ ಕಮ್ಯುನಿಕೇಷನ್ಸ್ ರೆಗ್ಯೂಲೇಟರಿ ಅಥಾರಿಟಿ (ಸಿಆರ್‌ಎ) ಪ್ರಕಾರ, ವಿಶ್ವಾದ್ಯಂತ ಇಂಟರ್‍ನೆಟ್ ವ್ಯತ್ಯಯವು ಡಿಎನ್‍ಎಸ್ ನ ಭದ್ರತೆ ಮತ್ತು ಬದ್ಧತೆಯನ್ನ ಕಾಪಾಡಲು ಅವಶ್ಯವಾಗಿದೆ. ಇದರಿಂದ ಮುಂದಿನ 48 ಗಂಟೆಗಳ ಇಂಟರ್‌ನೆಟ್ ಬಳಕೆದಾರಿಗೆ ಸಮಸ್ಯೆಯಗಲಿದೆ ಎಂದು ತಿಳಿಸಿದೆ.

ಇಂಟರ್‌ನೆಟ್ ವ್ಯವಹಾರ ಮಾಡುವವರು ಔಟ್ ಡೇಟೆಡ್ ಇಂಟರ್‍ನೆಟ್ ಸರ್ವೀಸ್ ಪ್ರೊವೈಡರ್ (ಐಎಸ್‍ಪಿ) ಬಳಸುತ್ತಿದ್ದರೆ ಅವರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಹೇಳಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *