Bengaluru City

ಯುವಕನಿಂದ ಅಸಭ್ಯ ವರ್ತನೆ- ಮರ್ಯಾದೆ ಹೋಯ್ತೆಂದು ಬಾಲಕಿ ಆತ್ಮಹತ್ಯೆ

Published

on

Share this

ಬೆಂಗಳೂರು: ಕೆಲ ದಿನಗಳ ಹಿಂದೆ ಯುವಕನೊಬ್ಬ ಬಾಲಕಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡು, ವಿಷಯ ಮನೆಯವರಿಗೆ ತಿಳಿದು, ಮರ್ಯಾದೆ ಹೋಯಿತೆಂದು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ.

ಅದೇ ಊರಿನ ಯುವಕ ಕೆಲ ದಿನಗಳ ಹಿಂದೆ ಬಾಲಕಿ ವಾಶ್ ರೂಂಗೆ ಹೋಗಿ ಬರುವಾಗ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದ. ಇದಾದ ನಂತರ ಈ ವಿಷಯವನ್ನು ಊರಿನ ಕೆಲವರಿಗೆ ಹೇಳಿಕೊಂಡಿದ್ದು, ಇದು ಬಾಲಕಿಯ ಪೋಷಕರ ಕಿವಿಗೂ ಬಿದ್ದಿದೆ. ಇದನ್ನೂ ಓದಿ: ಹಾಡಹಗಲೇ ದರೋಡೆಗೆ ಯತ್ನ- ಪೊಲೀಸರ ಅಣಕು ಪ್ರದರ್ಶನಕ್ಕೆ ಬೆಚ್ಚಿ ಬಿದ್ದ ಜನ

ಬಳಿಕ ಈ ಕುರಿತು ಪೋಷಕರು ಬಾಲಕಿಯನ್ನು ವಿಚಾರಿಸಿದ್ದು, ಎಲ್ಲಿರಿಗೂ ವಿಷಯ ತಿಳಿದಿದೆ. ಮಾನ ಮರ್ಯಾದೆ ಹೋಗಿದೆ ಎಂದು ಹುಡುಗಿ ಡೆತ್ ನೋಟ್ ಬರೆದಿಟ್ಟು ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ. ಈ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement