ನವದೆಹಲಿ: ಕೆಲ ವರ್ಷಗಳ ಹಿಂದೆ ಭಾರತದ ಹೊರಗೆ ಕೆಲವರಿಗಷ್ಟೇ ತಿಳಿದಿದ್ದ ಭಾರತೀಯ ಉದ್ಯಮಿ ಗೌತಮ್ ಅದಾನಿ ಇದೀಗ ವಿಶ್ವದಲ್ಲೇ 3ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಲೇಜನ್ನು ಅರ್ಧಕ್ಕೇ ನಿಲ್ಲಿಸಿ, ವಜ್ರದ ವ್ಯಾಪಾರ ಪ್ರಾರಂಭಿಸಿದ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೇ ಈ ಸ್ಥಾನಕ್ಕೆ ಏರಿದ ಏಷ್ಯಾದ ಮೊದಲ ವ್ಯಕ್ತಿಯೂ ಆಗಿದ್ದಾರೆ.
ಹೌದು, ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ 3ನೇ ಸ್ಥಾನವನ್ನು ಪ್ರವೇಶಿಸಿರುವುದು ಇದೇ ಮೊದಲು. ಈ ಸ್ಥಾನವನ್ನು ಗಳಿಸಲು ಮುಖೇಶ್, ಅಂಬಾನಿ, ಚೀನಾದ ಜಾಕ್ ಮಾ ರಿಂದ ಕೂಡಾ ಆಗಿರಲಿಲ್ಲ. ಇದೀಗ 137.4 ಬಿಲಿಯನ್ ಡಾಲರ್(10.97 ಲಕ್ಷ ಕೋಟಿ ರೂ.) ಮೊತ್ತದ ಆಸ್ತಿಯನ್ನು ಹೊಂದಿರುವ ಅದಾನಿ ಅವರು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನೂ ಹಿಂದಿಕ್ಕಿದ್ದಾರೆ. ಇದೀದ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹಾಗೂ ಅಮೆಜಾನ್ ಜೆಫ್ ಬೆಜೋಸ್ ಬಳಿಕದ ಸ್ಥಾನವನ್ನು ಅದಾನಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ
Advertisement
Advertisement
60 ವಯಸ್ಸಿನ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು, ಬಂದರುಗಳ ಉದ್ಯಮಗಳನ್ನು ವಿಸ್ತರಿಸುತ್ತಿದ್ದಾರೆ. ಡೇಟಾ ಕೇಂದ್ರಗಳಿಂದ ಹಿಡಿದು ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮೀನಿಯಂ ವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದಾನಿ ಗ್ರೂಪ್ ಈಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು, ವಿಮಾನ ನಿಲ್ದಾಣ ನಿರ್ವಾಹಕ, ಅನಿಲ ವಿತರಕ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಿದೆ. ಇದನ್ನೂ ಓದಿ: ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ
Advertisement
Advertisement
ಕೆಲವು ತಜ್ಞರು ಹಾಗೂ ಮಾರುಕಟ್ಟೆ ವೀಕ್ಷಕರು ಅದಾನಿ ಗ್ರೂಪ್‌ನ ಷೇರು ಹೂಡಿಕೆಗಳ ಗೌಪ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಂಪನಿ ಷೇರುಗಳು ಒಂದೇ ಸಮನೆ ಏರಿಕೆ ಕಾಣುತ್ತಲೇ ಇವೆ. ಕೆಲವು ಷೇರುಗಳ ಬೆಲೆ 2020ರ ಬಳಿಕ ಶೇ.1,000ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.