Bengaluru CityLatestLeading NewsMain Post

ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್‌ ಪ್ರಸ್ತಾವ

ಬೆಂಗಳೂರು: ಪ್ರತಿ ಲೀಟರ್‌ಗೆ ಹಾಲಿನ ದರ 3 ರೂಪಾಯಿ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಪ್ರಸ್ತಾವ ಸಲ್ಲಿಸಿದೆ.

15 ಹಾಲು ಒಕ್ಕೂಟಗಳು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿವೆ. ಕಳೆದ ಮೂರು ವರ್ಷಗಳ ಹಿಂದೆ ಸರ್ಕಾರ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ‌ಏರಿಕೆ ಮಾಡಿತ್ತು. ಬಳಿಕ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಲೇ ಇಲ್ಲ. ಹಲವು ಬಾರಿ ಸರ್ಕಾರಕ್ಕೆ ದರ ಏರಿಕೆ ಪ್ರಸ್ತಾವ ಸಲ್ಲಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಆದರೆ ಈ ಬಾರಿ ದರ ಏರಿಕೆ ಮಾಡಲೇಬೇಕು ಎಂದು ಕೆಎಂಎಫ್‌ ಒತ್ತಾಯಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಈಗ ಲೀಟರ್‌ಗೆ 37 ರೂಪಾಯಿ ನೀಡುತ್ತಿದ್ದಾರೆ. 3 ರೂಪಾಯಿ ದರ ಏರಿಕೆ ಮಾಡಿದರೆ, 40 ರೂಪಾಯಿ‌ ಏರಿಕೆ ಆಗಲಿದೆ. ಬೇರೆ ರಾಜ್ಯಗಳಲ್ಲಿ ಹೆಚ್ಷಿನ ಬೆಲೆಗೆ ಹಾಲು ಮಾರಾಟ‌ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಕೆಎಂಎಫ್‌ನಿಂದ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ದರ ಏರಿಕೆ ಪ್ರಸ್ತಾವವನ್ನು ಸರ್ಕಾರದ ಮುಂದಿಡಲಾಗಿದೆ.

ಸರ್ಕಾರ ದರ ಏರಿಕೆ ಮಾಡದಿದ್ದರೆ ಪ್ರತಿಭಟನೆ ಮಾಡಲು ಹಾಲು ಒಕ್ಕೂಟದವರು ಚಿಂತನೆ ನಡೆಸಿದ್ದಾರೆ. ಬೆಲೆ ಏರಿಕೆ ಮಧ್ಯೆ ಹಾಲು ಉತ್ಪಾದನೆ, ಹೈನುಗಾರಿಕೆ ಕಷ್ಟ ಆಗುತ್ತಿದೆ. ಉಳಿತಾಯ ಮಾಡುವುದಕ್ಕೆ ಸಾಧ್ಯ ‌ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಐತಿಹಾಸಿಕ ಮಳೆಗೆ ರೇಷ್ಮೆನಗರಿ ತತ್ತರ – ಮಲೆನಾಡಿನಂತಾದ ಬಯಲು ಸೀಮೆ ರಾಮನಗರ

Live Tv

Leave a Reply

Your email address will not be published.

Back to top button