Connect with us

Bengaluru City

ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

Published

on

ಬೆಂಗಳೂರು: ನಗರದಲ್ಲಿ ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತಾದ ಪೊಲೀಸ್ ಪೇದೆಗಳಾಗಿದ್ದಾರೆ. ಇವರೆಲ್ಲರೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರಾಗಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚುನಾವಣೆ ವೇಳೆ ಸಾರ್ವಜನಿಕರು ರೈಫಲ್ ಗಳನ್ನು ಠಾಣೆಗೆ ಸರೆಂಡರ್ ಮಾಡಿದ್ದರು. ಇದರಲ್ಲಿ ಪೊಲೀಸ್ ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್ ಕದ್ದಿದ್ದರು. ರೈಫಲ್ ಗಳು ಕುಮಾರಸ್ವಾಮಿ ಲೇಔಟ್ ಠಾಣೆ ಪಿಎಸ್‍ಐ ಸುಮಾ ಉಸ್ತುವಾರಿಯಲ್ಲಿದ್ದವು. ಪೇದೆಗಳು ಪಿಎಸ್‍ಐ ಸುಮಾ ಇಲ್ಲದಿದ್ದಾಗ ಸ್ಟೇಷನ್ ನಿಂದಲೇ ಕಳ್ಳತನ ಮಾಡಿದ್ದರು. ತಾವು ಕಳ್ಳತನ ಮಾಡಿ ಇನ್ಸ್ ಪೆಕ್ಟರ್ ಹಾಗೂ ಪಿಎಸ್ ಐ ಮೇಲೆ ಆರೋಪ ಬರಲಿ ಎಂದು ಕದ್ದು ಮುಚ್ಚಿಟ್ಟಿದ್ದರು.

ವಿಚಾರಣೆ ಮಾಡುವ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಪೇದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಪೇದೆಗಳ ಬಣ್ಣ ಬಯಲಾಗಿದೆ. ಆನಂತರ ತಾವೇ ರೈಫಲ್ ಕದ್ದಿರುವುದಾಗಿ ನಾಲ್ವರು ಪೇದೆಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.