– ಯುಪಿಎ ಅವಧಿಯಲ್ಲಿ 60,779 ಕೋಟಿ ತೆರಿಗೆ ಹಂಚಿಕೆ
ಬೆಂಗಳೂರು: ಎನ್‌ಡಿಎ (NDA) ಅವಧಿಯಲ್ಲಿ 2,95,817 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.
Advertisement
ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಮಾಡಲಾಗಿದೆ ಎಂಬ ಕಾಂಗ್ರೆಸ್ (Congress) ಆರೋಪಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನಗಳ ವಿವರ ನೀಡಿ ಕರ್ನಾಟಕ (Karnataka) ವಿಚಾರದಲ್ಲಿ ಸಾಕಷ್ಟು ತಪ್ಪು ಮಾಹಿತಿ ಹರಿಯಬಿಡಲಾಗುತ್ತಿದೆ ಎಂದು ತಿಳಿಸಿದರು.
Advertisement
ಯುಪಿಎ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಅನುದಾನ ಹಂಚಿಕೆ 66 ಸಾವಿರ ಕೋಟಿ ರೂ.ಇದ್ದರೆ 2024 ರ ಒಂದೇ ವರ್ಷದಲ್ಲಿ ಎನ್‌ಡಿಎಯಿಂದ 45,485 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ 60,779 ಕೋಟಿ ರೂ. ತೆರಿಗೆ ಹಂಚಿಕೆಯಾಗಿದ್ದರೆ ಎನ್‌ಡಿಎ ಅವಧಿಯಲ್ಲಿ 2,36,955 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದೆ. ಇಷ್ಟಾದರೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ತಪ್ಪು ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: 2010 ರಲ್ಲೇ ಸಿಎಂ ಆಗಬೇಕಿತ್ತು, ಆಗ ಅವಕಾಶ ಕೈ ತಪ್ಪಿತ್ತು: ವಿಜಯ್ ಶಂಕರ್
Advertisement
Through this budget, Banks will provide loans to MSMEs for the purchase of machinery & equipment without any collateral or third-party guarantee.
Also, MSMEs complained that Banks did not understand their turnover cycle or business and hence had reservations about lending loans… pic.twitter.com/cHaBaiwx9A
— Nirmala Sitharaman Office (@nsitharamanoffc) July 28, 2024
ಕಲಬುರ್ಗಿಯಲ್ಲಿ ಪಿಎಂ ಮಿತ್ರ ಅಡಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲಾಗಿದೆ. ರೈಲ್ವೇಗೆ ಯುಪಿಎ ಎರಡನೇ ಅವಧಿಯಲ್ಲಿ 834 ಕೋಟಿ ರೂ. ಅನುದಾನ ಕೊಡಲಾಗಿತ್ತು. ಎನ್‌ಡಿಎ ಅವಧಿಯಲ್ಲಿ ಈ ಬಜೆಟ್‌ನಲ್ಲಿ 7,559 ಕೋಟಿ ರೂ. ರೈಲ್ವೆ ಯೋಜನೆಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
Advertisement
ಇತ್ತೀಚೆಗೆ 1 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಕಾಮಗಾರಿಗಳಲ್ಲಿ ನೀಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಕ್ಕಿದೆ. ಸರಾಸರಿ ರಾಷ್ಟ್ರೀಯ ಅನುದಾನ ಹಂಚಿಕೆ ಪ್ರಮಾಣ 5.4% ಇದ್ದರೆ ಕರ್ನಾಟಕಕ್ಕೆ 6.58% ಪಾಲು ಸಿಕ್ಕಿದೆ ಎಂದರು.
ST ಸಮುದಾಯದ ಕಲ್ಯಾಣಕ್ಕೆ ಮೀಸಲಿದ್ದ ಬಹುಕೋಟಿ ಹಣ ಖಾಸಗಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಹಣ ಯಾರ ಪಾಲಾಗಿದೆ? ಚುನಾವಣೆ ಪೂರ್ವ ಶೋಷಿತರ ಕಲ್ಯಾಣಕ್ಕೆ ಶ್ರಮಿಸುವುದಾಗಿ ಹೇಳಿ, ಈಗ ದ್ರೋಹ ಬಗೆದಿದೆ @INCKarnataka ಸರ್ಕಾರ.
– ಶ್ರೀಮತಿ @nsitharaman , ಕೇಂದ್ರ ಹಣಕಾಸು ಸಚಿವರು. pic.twitter.com/k3pytwZ4F6
— BJP Karnataka (@BJP4Karnataka) July 28, 2024
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ದರ ಹೆಚ್ಚಳವಾಗಿ ಹಣದುಬ್ಬರ ಏರಿಕೆಯಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಸಾಲ ಮಾಡಿದೆ. ಎಸ್‌ಸಿ, ಎಸ್‌ಟಿ ವರ್ಗಗಳ ಹಣ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ವಾಲ್ಮೀಕಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಯಲಿಗೆ ಬಂದಿದ್ದು ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.