ಬೆಂಗಳೂರು: ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ಅನುದಾನ ಜಟಾಪಟಿ ಜೋರಾಗಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಶಾಸಕ ಶಿವಲಿಂಗೇಗೌಡ (Shivalinge Gowda) ಅಕ್ಕಿ (Rice) ಕೊಡುವ ವಿಚಾರವಾಗಿ ಪ್ರಸ್ತಾಪ ಮಾಡಿದರು.
ವಿರೋಧ ಪಕ್ಷದವರು ಬಹಳ ನಗುತ್ತಿದ್ದೀರಿ. ನಗುತ್ತಾ ಇರಿ, ನಿಮಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠವಾಗಲಿದೆ. ಬಡವರಿಗೆ ಅಕ್ಕಿ ಕೊಡೋದಕ್ಕೆ ನಿಮಗೇನು ಕಷ್ಟ? ಅಕ್ಕಿ ಕೊಡೋದ್ರಲ್ಲೂ ನೀವು ರಾಜಕಾರಣ ಮಾಡಿದ್ರಲ್ಲಾ? ಎಷ್ಟು ಕೋಟಿ ರಾಜ್ಯದಿಂದ ಟ್ಯಾಕ್ಸ್ ಕೇಂದ್ರಕ್ಕೆ ಹೋಯಿತು? ನೀವು ಧೀಮಂತರಾದ್ರಿ, ನಾವು ಸಾಮಂತರಾದ್ವಿ. ಎಷ್ಟು ಅನುದಾನ ಬಂತು ನಿಮ್ಮ ಕೇಂದ್ರದಿಂದ? ಎಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.
Advertisement
Advertisement
ಈ ವೇಳೆ ಸುಳ್ಳು ಹೇಳ್ಬೇಡಿ ಎಂದು ಶಿವಲಿಂಗೇಗೌಡ ಮಾತಿಗೆ ಅಶೋಕ್ ಆಕ್ಷೇಪ ವ್ಯಕ್ತಪಡಿಸಿ, ಯುಪಿಎ ಸರ್ಕಾರ ಕೊಟ್ಟ 5 ಪಟ್ಟು ಹಣವನ್ನು ನಮ್ಮ ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ವಿಧಾನಸಭೆಯಲ್ಲಿ 15 ಲಕ್ಷದ ಜಟಾಪಟಿ – ಕಾಂಗ್ರೆಸ್, ಬಿಜೆಪಿ ವಾಕ್ಸಮರ
Advertisement
ಶಾಸಕ ಶಿವಲಿಂಗೇಗೌಡ ವರ್ಸಸ್ ಬಿಜೆಪಿ ಶಾಸಕರ ನಡುವೆ ವಾಗ್ವಾದ ಜೋರಾದಾಗ ನಿಮ್ಮನ್ನು ಏನು ಸುಮ್ಮನೆ ಬಿಡೋಕೆ ಆಗುತ್ತಾ? ಎಂಪಿ ಎಲೆಕ್ಷನ್ನಲ್ಲಿ ನಿಮ್ಮನ್ನು ಹಾಕ್ಕೊಂಡು ಅರೀತೀವಿ (ಅರೆಯುತ್ತೇವೆ). ನಿಮ್ಮನ್ನು ಸುಮ್ಮನೆ ಬಿಟ್ಟು ಬಿಡ್ತೀವಾ ಎಂದು ಶಿವಲಿಂಗೇಗೌಡ ಟಾಂಗ್ ಕೊಟ್ಟರು.
Advertisement
ಆಗ ಶಿವಲಿಂಗೇಗೌಡ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿ, ಇಷ್ಟು ವರ್ಷ ಜೆಡಿಎಸ್ನಲ್ಲಿ ಏನ್ ಅರೆದ್ರಿ? ಈಗ ಕಾಂಗ್ರೆಸ್ ನಲ್ಲಿ ಏನ್ ಅರೆದ್ರಿ? ಹೇಳಿ ಎಂದು ಖಾರವಾಗಿ ಪ್ರಶ್ನಿಸಿದರು. ಆಗ ಶಿವಲಿಂಗೇಗೌಡ ಮತ್ತೆ ಟಾಂಗ್ ಕೊಟ್ಟು, ಬರೀ ಶಿವಲಿಂಗೇಗೌಡ ಹಿಂದೆ ಏಕೆ ಬರ್ತೀರಾ? ಉರಿಗೌಡನ ಹಿಂದೆ ಹೋಗಿ ಎಂದು ಬಿಜೆಪಿ ಶಾಸಕರನ್ನು ಕಿಚಾಯಿಸಿದರು. ಇದನ್ನೂ ಓದಿ: ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತಾರೆ: ವಿಧಾನಸಭೆಯಲ್ಲಿ ಶಾಸಕಿ ಅಳಲು
Web Stories