ಗೋಲ್ಡನ್ ಕಲರ್ ಡಿಸೈನರ್ ಸೀರೆಗಳು (Golden Saree) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಸೆಲೆಬ್ರಿಟಿ ಲುಕ್ (Celebrity Look) ನೀಡುವ ಈ ಶೇಡ್‌ನ ಸೀರೆಗಳು, ನಾನಾ ಫ್ಯಾಬ್ರಿಕ್ ಹಾಗೂ ವಿನ್ಯಾಸದಲ್ಲಿ ಕಾಲಿಟ್ಟಿದ್ದು, ಪಾರ್ಟಿಪ್ರಿಯ ಮಹಿಳೆಯರನ್ನು ಆಕರ್ಷಿಸಿವೆ. ಗೋಲ್ಡನ್ ಶೇಡ್‌ನ ಡಿಸೈನರ್ ಸೀರೆಗಳು ಎಂತಹ ಮಹಿಳೆಯರನ್ನು ಕೂಡ ಅಂದವಾಗಿ ಬಿಂಬಿಸುತ್ತವೆ. ಈ ವರ್ಣದ ಸೀರೆಗೆ ಹೆಚ್ಚು ಆಕ್ಸೆಸರೀಸ್ ಹಾಕುವ ಅಗತ್ಯವಿಲ್ಲ, ಸೀರೆಗಳೇ ಮಿನುಗುತ್ತವೆ. ಜಗಮಗಿಸುತ್ತವೆ. ಆ ಮಟ್ಟಿಗೆ ಈ ಗೋಲ್ಡನ್ ಶೇಡ್‌ನ ಮಿರಮಿರ ಮಿನುಗುವ ಸೀರೆಗಳು ಆಗಮಿಸಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ.
Advertisement
ನೋಡಲು ಒಂದೇ ಶೇಡ್ ಆದರೂ ಇದರಲ್ಲೆ ಕೊಂಚ ಡಾರ್ಕ್, ಲೈಟ್ ಹಾಗೂ ಬಗೆಬಗೆಯ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ. ಸದ್ಯ ಮಾರುಕಟ್ಟೆಯಲ್ಲಿ ಗೋಲ್ಡನ್ ವರ್ಣದ ಸೀರೆಗಳು ಈ ಸೀಸನ್‌ನಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿವೆ. ಇದನ್ನೂ ಓದಿ:ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ಸಮಂತಾ
Advertisement
Advertisement
ಸಿಕ್ವೀನ್ಸ್ ಗೋಲ್ಡನ್ ಸೀರೆ, ಶಿಮ್ಮರ್ ಗೋಲ್ಡನ್ ಸೀರೆ, ಎಂಬಾಲಿಶ್ಡ್, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್ ಸೀರೆ, ನೆಟ್ಟೆಡ್ ಗೋಲ್ಡನ್, ಜಾರ್ಜೆಟ್ ಗೋಲ್ಡನ್, ಸಾಟಿನ್ ಗೋಲ್ಡನ್ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನ ಗೋಲ್ಡನ್ ಸೀರೆಗಳು ಟ್ರೆಂಡಿಯಾಗಿವೆ. ಮಹಿಳೆಯರು ಕೂಡ ಅವರವರ ಅಭಿಲಾಷೆಗೆ ತಕ್ಕಂತೆ ಈ ಶೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
Advertisement
ಸೆಲೆಬ್ರಿಟಿಗಳು ಹಾಗೂ ಪಾರ್ಟಿ ಪ್ರಿಯರು ಅತಿ ಹೆಚ್ಚು ಗೋಲ್ಡನ್ ಸೀರೆಗಳನ್ನು ಇಷ್ಟಪಡುತ್ತಾರಂತೆ. ಸೆಲೆಬ್ರಿಟಿಯಂತೆ ತಾವು ಕೂಡ ಕಾಣಿಸಬೇಕು ಎಂದು ಬಯಸುವವರು ಕೂಡ ಗೋಲ್ಡನ್ ಸೀರೆಗಳ ಮೊರೆ ಹೋಗುತ್ತಾರೆ. ಗೋಲ್ಡನ್ ಸೀರೆಗೆ ಅದೇ ರೀತಿಯ ಬ್ಲೌಸ್ ಹಾಕುವುದು ಇದೀಗ ತೀರಾ ಕಡಿಮೆಯಾಗಿದೆ. ಬ್ಲಾಕ್, ವೆಲ್ವೆಟ್, ಸ್ಲಿವ್‌ಲೆಸ್, ಹಾಲ್ಟರ್ ನೆಕ್, ಬಿಕಿನಿ ಬ್ಲೌಸ್, ಬ್ಯಾಕ್‌ಲೆಸ್ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಇದು ಗ್ಲಾಮರಸ್ ಲುಕ್ ನೀಡೋದು ಟ್ರೆಂಡ್ ಆಗಿದೆ.
ಫ್ಯಾಷನ್ ಟಿಪ್ಸ್:
* ನಿಮ್ಮ ಸ್ಕಿನ್ ಟೋನ್‌ಗೆ ಹೊಂದುವ ಗೋಲ್ಡನ್ ಶೇಡ್ಸ್ ಆಯ್ಕೆ ಮಾಡಿ.
* ಆದಷ್ಟೂ ಬಾರ್ಡರ್ ಇಲ್ಲದ ಗೋಲ್ಡನ್ ಸೀರೆ ಪಾರ್ಟಿಲುಕ್ ನೀಡುವುದು.
* ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
* ಸಾಫ್ಟ್ ಫ್ಯಾಬ್ರಿಕ್‌ನ ಗೋಲ್ಡನ್ ಸೀರೆಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಬಹುದು.