ಕಾರವಾರ: ಹೊಲದಲ್ಲಿ ಬೆಳೆದಿದ್ದ ಗಾಂಜಾ ವಶಪಡಿಸಿಕೊಂಡು ರೈತನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಮುಂಡಗೋಡಿನ ಮೈನಳ್ಳಿ ಗ್ರಾಮದ ರಾಮು ಬಾಬು (42) ಬಂಧಿತ ರೈತ. ಈತ ತನ್ನ ಹೊಲದಲ್ಲಿ ಭತ್ತದ ಸಸಿಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದನು.
Advertisement
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಡಗೋಡಿನ ತಹಶೀಲ್ದಾರ್ ಅಶೋಕ್ ಗುರಾಣಿ, ಪಿ.ಐ ಕಿರಣ್ ಕುಮಾರ್ ನಾಯಕ್ ನೇತ್ರತ್ವದಲ್ಲಿ ದಾಳಿ ನೆಡೆಸಿ 5 ಸಾವಿರ ರೂ. ಮೌಲ್ಯದ ಸುಮಾರು 33 ಗಾಂಜಾ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಈ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಇತ್ತೀಚೆಗಷ್ಟೇ ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಎಂಬ ನಾಲ್ವರು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದರು.