DharwadDistrictsKarnatakaLatestMain Post

ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು

ಧಾರವಾಡ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಕುಟುಂಬಸ್ಥರು ಪರದಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಅಜ್ಜಿ ಯಲ್ಲಮ್ಮ ಮಂಟೂರ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಮುಂದಾಗಿದ್ದರು. ಈ ವೇಳೆ ಗ್ರಾಮದಲ್ಲಿ ಮೊದಲಿನಿಂದಲೂ ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ಅಜ್ಜಿಯನ್ನು ಮಣ್ಣು ಮಾಡಲು ಮುಂದಾದಾಗ, ಇದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ವಿರೋಧ ಮಾಡಿದ್ದಾರೆ.

ಅಲ್ಲದೇ ಆ ಜಾಗ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸ್ಥಳಕ್ಕೆ ನವಲಗುಂದ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಬಂದು ಸಮಸ್ಯೆ ಬಗೆಹರಿಸಲು ಮುಂದಾದಾಗ, ರುದ್ರಗೌಡ, ಹಿರೇಗೌಡ್ರ ತಮ್ಮ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ನಂತರ ಅಜ್ಜಿಯ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ:  ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ 

ರುದ್ರಗೌಡರ ಹೊಲವನ್ನೇ ಸರ್ಕಾರ ಸ್ಮಶಾನಕ್ಕೆ ಪಡೆದುಕೊಳ್ಳಲು ಮುಂದಾಗಿದೆ. ಅಜ್ಜಿಯ ಸಾವಿಗೆ ಜಾಗನೇ ಸಿಗದೆ ಇದ್ದಾಗ, ಗ್ರಾಮದ ಒಬ್ಬರು ಮುಂದೆ ಬಂದು ಜಮೀನು ಕೊಟ್ಟಿದ್ದಾರೆ. ಇಡೀ ಗ್ರಾಮಸ್ಥರಿಗೆ ಈಗ ಸ್ಮಶಾನ ಸಿಕ್ಕಂತೆ ಆಗಿದೆ ಎಂದು ಜನ ಎಲ್ಲ ಮಾತನಾಡಿಕೊಂಡರು.

Leave a Reply

Your email address will not be published.

Back to top button