- ಆನೆಗಳಿಗೆ ಹಿಂಸೆ ನೀಡುವ ಬದಲು, ಕಾಡಿನಲ್ಲೇ ಬಿಟ್ಬಿಡಿ ಎಂದ ಪರಿಸರವಾದಿಗಳು
ಶಿವಮೊಗ್ಗ: ಸಕ್ರೆಬೈಲಿನಲ್ಲಿ (Sakrebyle) ಆನೆಯ (Elephant) ಕಾಲಿಗೆ ತರಬೇತಿ ವೇಳೆ ಗಾಯವಾಗಿದ್ದು, ದಿನದಿಂದ ದಿನಕ್ಕೆ ಗಾಯ ಉಲ್ಬಣಗೊಳ್ಳುತ್ತಿದೆ.
ವಿಕ್ರಾಂತ್ ಆನೆಯ ಮುಂಭಾಗದ ಎಡಗಾಲಿನಲ್ಲಿ ಹೊಸ ಗಾಯವಾಗಿದೆ. ತರಬೇತಿ ವೇಳೆ ಸಿಬ್ಬಂದಿ ಚುಚ್ಚಿದ್ದರಿಂದ ಆನೆಯ ಕಾಲಿಗೆ ಗಾಯವಾಗಿದೆ. ಈ ಹಿಂದೆ ಸಹ ಆನೆಯ ಕಾಲಿಗೆ ಗಾಯವಾಗಿತ್ತು. ಸತತ 6 ತಿಂಗಳ ಚಿಕಿತ್ಸೆ ಬಳಿಕ ಈಗಷ್ಟೇ ಆನೆ ಚೇತರಿಸಿಕೊಳ್ಳುತ್ತಿತ್ತು. ಇದೀಗ ಮತ್ತೆ ಗಾಯವಾಗಿದ್ದು ನೋವಲ್ಲಿ ಆನೆ ನರಳುತ್ತಿದೆ. ಇದನ್ನೂ ಓದಿ: ಹಂಪಿ ಆನೆ ಲಕ್ಷ್ಮಿ ಸ್ಥಳಾಂತರಕ್ಕೆ ಭಾರಿ ವಿರೋಧ – ಮಾವುತನ ಕುಟುಂಬದ ಕಣ್ಣೀರು, ಸ್ಥಳೀಯರಿಂದ ಪ್ರತಿಭಟನೆ!
ಹಾಸನದ ಸಕಲೇಶಪುರ ಭಾಗದಲ್ಲಿ 2025ರ ಮಾರ್ಚ್ ತಿಂಗಳಲ್ಲಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಸಕ್ರೇಬೈಲು ಆನೆ ಬಿಡಾರಕ್ಕೆ ಅದನ್ನು ಶಿಫ್ಟ್ ಮಾಡಲಾಗಿತ್ತು. ಕ್ರಾಲ್‌ಗೆ ಹಾಕಿದ ಕೆಲವು ದಿನಗಳಲ್ಲೇ ಆನೆ ಕಾಲಿಗೆ ಗಾಯವಾಗಿತ್ತು.
ಈ ವಿಚಾರ ಪರಿಸರ ಆಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಆನೆಗಳ ಆರೋಗ್ಯ ವಿಚಾರದಲ್ಲಿ ಪದೇ ಪದೇ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಒಂದು ಕಡೆ ಚಿಕಿತ್ಸೆ ನೀಡೋದ್ರಲ್ಲಿ ಮತ್ತೊಂದು ಕಡೆ ಅಸಹಜ ಗಾಯವಾಗಿದೆ. ಆನೆಗಳ ಬಗ್ಗೆ ಕಾಳಜಿ ವಹಿಸಬೇಕಾದ ವನ್ಯಜೀವಿ ಅಧಿಕಾರಿಗಳಿಂದಲೂ ಕಡೆಗಣನೆಯಾಗಿದೆ. ಆನೆ ನೋಡಿಕೊಳ್ಳಲು ಸಾಧ್ಯವಿಲ್ಲದಿದ್ರೇ ಸೆರೆ ಹಿಡಿಯೋದು ಯಾಕೆ ಎಂದು ಪರಿಸರಾಸಕ್ತರು ಆಕ್ರೋಶ ಹೊರಹಾಕಿದ್ದಾರೆ.
ಆನೆಗಳಿಗೆ ಚಿಕಿತ್ಸೆ ನೀಡಲು, ಅರಣ್ಯ ಇಲಾಖೆಯಲ್ಲಿ ತಜ್ಞ ವೈದ್ಯರಿಲ್ಲ. ಆನೆಗಳಿಗೆ ಹಿಂಸೆ ನೀಡುವ ಬದಲು, ಕಾಡಿನಲ್ಲೇ ಬಿಟ್ಟು ಬಿಡಿ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳ ವಿರುದ್ಧ ಪರಿಸರವಾದಿ ಜೋಸೆಫ್ ಹೂವರ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾಳಗ – ದಾಳಿ ಮಾಡಿದ್ದ ಕಂಜನ್ ಆನೆಗೆ ದಸರಾದಿಂದ ಕೊಕ್
