– ಜಾರಕಿಹೊಳಿ ಬಾಮೈದ, ಆಪ್ತರ ಬಳಿ 13 ಕೋಟಿ ಸಂಪತ್ತು
– ಮಂತ್ಲಿ ವಸೂಲಿ, ಅಧಿಕಾರಿಗಳ ಕುಟುಂಬಸ್ಥರಿಗೆ ಬಾರ್ ಲೈಸೆನ್ಸ್
ಬೆಂಗಳೂರು: ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಜಾರಿ ನಿರ್ದೇಶನಾಲಯ (Enforcement Directorate) ಬಯಲಿಗೆಳೆದಿದ್ದು, ಇಡೀ ಇಲಾಖೆಯ ಅಕ್ರಮಗಳನ್ನ ಹೊರಗೆಳೆಯುವ ಕೆಲಸ ಮಾಡಿದೆ.
ನಿನ್ನೆ (ಬುಧವಾರ) ಅಬಕಾರಿ ಇಲಾಖೆಯ (Excise Department) ಹೆಚ್ಚುವರಿ ಆಯುಕ್ತ ಮಂಜುನಾಥ್ ಸೇರಿದಂತೆ ಆಪ್ತರು ಹಾಗೂ ಇತರರ ಮನೆ ಮೇಲೆ 14 ಕಡೆ ದಾಳಿ ನಡೆಸಿದ್ದ ಇ.ಡಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ.

ಅಲ್ಲದೇ ಅಬಕಾರಿ ಅಧಿಕಾರಿಗಳ ಹೆಸರಲ್ಲೇ ನೂರಾರು ಬಾರ್ ಲೈಸೆನ್ಸ್ (Bar License) ಹೊಂದಿರೋದು ಪತ್ತೆಯಾಗಿದ್ದು, ಲಂಚ ಸಂಗ್ರಹಕ್ಕಾಗಿ ಅಧಿಕಾರಿಗಳು ಸಂಘಟಿತ ಸಿಂಡಿಕೇಟ್ ಮಾಡಿಕೊಂಡಿರೋ ಬಗ್ಗೆ ಬಯಲಿಗೆ ಬಂದಿದೆ. ಇಡಿ ರೇಡ್‌ನಿಂದ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.
ಎಲ್ಲೆಲ್ಲಿ ಇಡಿ ದಾಳಿ?
* ವೈ.ಡಿ. ಮಂಜುನಾಥ್, ಅಬಕಾರಿ ಹೆಚ್ಚುವರಿ ಆಯುಕ್ತ-ಬೆಳಗಾವಿ
* ಮಂಜುನಾಥ್ ಕುಟುಂಬಸ್ಥರು, ಪಾರ್ಟನರ್‌ಗಳು
* ಜಗದೀಶ್ ನಾಯಕ್
* ಕೆ.ಎಂ. ತಮ್ಮಣ್ಣ ಅವರ ಮನೆ ಮೇಲೆ ದಾಳಿ
ಇಡಿ ರೇಡ್‌ನಲ್ಲಿ ಸಿಕ್ಕಿದ್ದೇನು..?
* 5.5 ಕೋಟಿ ನಗದು
* 7.8 ಕೋಟಿ ಮೌಲ್ಯದ ಚಿನ್ನಾಭರಣ
* 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ
* 14 ಕಡೆ ದಾಳಿ, ಒಟ್ಟು 13.3 ಕೋಟಿ ಮೌಲ್ಯ ನಗ,ನಾಣ್ಯ ಪತ್ತೆ
* ಡಿಜಿಟಲ್ ಸಾಧನಗಳು, ಲಂಚ ಹಂಚಿಕೆ ಲೆಕ್ಕ ಪುಸ್ತಕ
* ಆಸ್ತಿ ದಾಖಲೆಗಳು ವಶ
ಭ್ರಷ್ಟಾಚಾರ ಬಯಲಾಗಿದ್ದೇಗೆ..?
* ಬಾರ್‌ಗಳಿಂದ ಲಂಚ ಹಂಚಿಕೆಯ ಅನಧಿಕೃತ ಡೈರಿ ಪತ್ತೆ
* ಪ್ರತಿ ತಿಂಗಳು ಕಮೀಷನ್ ಫಿಕ್ಸ್ ಮಾಡಿಕೊಂಡಿದ್ದ ಅಧಿಕಾರಿಗಳು
* ಲೈಸೆನ್ಸ್ ರಿನೀವಲ್, ಹೊಸ ಲೈಸೆನ್ಸ್, ಲೈಸೆನ್ಸ್ ಶಿಫ್ಟಿಂಗ್‌ನಲ್ಲಿ ಭ್ರಷ್ಟಾಚಾರ
* ಪ್ರತಿ ತಿಂಗಳು ಲಂಚ ವಸೂಲಿ, ಅಧಿಕಾರಿಗಳ ಕುಟುಂಬಸ್ಥರಿಗೆ ಬಾರ್ ಲೈಸೆನ್ಸ್
* ಕುಟುಂಬಸ್ಥರ ಹೆಸರಿನಲ್ಲೇ ಮದ್ಯದಂಗಡಿಗಳ ಲೈಸೆನ್ಸ್
* ಭಾರೀ ಪ್ರಮಾಣದಲ್ಲಿ ಬೇನಾಮಿ ವಹಿವಾಟು ಪತ್ತೆ
* ಅಧಿಕಾರಿಗಳು, ಏಜೆಂಟ್‌ಗಳಿಂದ ಲಂಚ ಸಂಗ್ರಹಕ್ಕಾಗಿ ಸಂಘಟಿತ ಜಾಲ
