ಬೆಂಗಳೂರು: ನಗರದ ಲುಂಬಿನಿ ಗಾರ್ಡನ್‍ನಲ್ಲಿ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಪುತ್ಥಳಿ ಕದ್ದ ಘಟನೆ ನಡೆದಿದೆ.
ಡಾ. ರಾಜ್ ಪುತ್ಥಳಿಯು ಲುಂಬಿನಿ ಗಾರ್ಡನ್‍ನಲ್ಲಿತ್ತು. ಕಳ್ಳರು 2 ದಿನಗಳ ಹಿಂದೆಯೇ ರಾಜ್‍ಕುಮಾರ್ ಕಂಚಿನ ಪ್ರತಿಮೆ ಕದ್ದುಕೊಂಡು ಹೋಗಿದ್ದರು. ಕೃತ್ಯದ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ
Advertisement
Advertisement
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ್ದ ಪುತ್ಥಳಿಯನ್ನು ಕಳ್ಳರು ಗುಜರಿ ಅಂಗಡಿಗೆ ಹಾಕಿದ್ದರು.