ಚಿಕ್ಕೋಡಿ: ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರ್ಕಾರ ಇವುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ, ನಾವು ಮುಂದೊಂದು ದಿನ ಹಿಂದೂ ಜಿಹಾದ್ ಪ್ರಾರಂಭ ಮಾಡಬೇಕಾಗುತ್ತದೆ ಎಂದು RSS ಮುಖಂಡ ಅರವಿಂದ್ ರಾವ್ ದೇಶಪಾಂಡೆ ಆಕ್ರೋಶ ಹೊರಹಾಕಿದರು.
Advertisement
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ, ಅಥಣಿ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಬಜರಂಗದಳ ಸಂಘಟನೆಗಳು ಜೊತೆಯಾಗಿ ಶಿವಾಜಿ ಸರ್ಕಲ್ ನಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪಾದಯಾತ್ರೆ ಮಾಡುವ ಮೂಲಕ ಹರ್ಷನ ಹತ್ಯೆಯನ್ನು ಖಂಡಿಸಿತು. ಇದೇ ಸಂದರ್ಭದಲ್ಲಿ ಸಂಘ ಪರಿವಾರದ ಉತ್ತರ ಪ್ರಾಂತ್ಯ ಮುಖಂಡರಾದ ಅರವಿಂದ್ ರಾವ್ ದೇಶಪಾಂಡೆ ಅವರು ಕೊಲೆಯನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು
Advertisement
Advertisement
ಇನ್ನು ಮುಂದೆ ಯಾವುದೇ ಹಿಂದೂ ಯುವಕನ ಮೇಲೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದರೊಂದಿಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಬಿಳ್ಳದಿದ್ದರೆ ನಾವು ಕೂಡ ಮುಂದೊಂದು ದಿನ ಹಿಂದೂ ಜಿಹಾದ್ ಜಾರಿ ಮಾಡುವ ಸನ್ನಿವೇಶ ನಿರ್ಮಾಣ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.
Advertisement
ಪೊಲೀಸರು ಬರೋವರೆಗೂ ನೀವು ಕಾಯಬೇಡಿ ಅವರಿಗೆ ಸರಿಯಾಗಿ ಉತ್ತರ ಕೊಡಿ. ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ ಅವ್ಯಾಹತವಾಗಿ ನಡೆಯುತ್ತಿತ್ತು. ನಾವು ಆಗ ಅವರ ಭಾಷೆಯಲ್ಲಿಯೇ ಉತ್ತರ ಕೊಟ್ಟೆವು. ಆಗ ಅವರೇ ನಮ್ಮ ಬಳಿ ಸಂಧಾನಕ್ಕೆ ಬಂದರು ಎಂದು ವಿವರಿಸಿದರು.
ಕೇರಳದಲ್ಲಿ ಒಬ್ಬರನ್ನು ಹೊಡೆದರೆ ನಾವು ಇಬ್ಬರನ್ನು ಹೊಡೆಯುತ್ತಿದ್ದೆವು. ಅವರು ನಾಲ್ಕು ಜನರನ್ನು ಹೊಡೆದರೆ ನಾವೂ ಸಹ ನಾಲ್ಕು ಜನರನ್ನು ಹೊಡೆಯುತ್ತಿದ್ದೆವು. ಹೀಗಾಗಿ ಅವರೇ ಸಂಧಾನ ಮಾಡಿಕೊಂಡು ನಂತರ ರಕ್ತಪಾತ ಅಲ್ಲಿ ಕಡಿಮೆ ಆಯ್ತು ಎಂದು ಭಾಷಣ ಮಾಡಿದರು. ಇದನ್ನೂ ಓದಿ: ಇನ್ನೊಬ್ಬನ ಜೊತೆ ಎಂಗೇಜ್ಮೆಂಟ್ – ಸಿಟ್ಟಿನಿಂದ ಪ್ರೇಯಸಿಗೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ!
ಇದೇ ಸಂದರ್ಭದಲ್ಲಿ ರೈತಮುಖಂಡ ರಾಜಕುಮಾರ್ ಜಂಬಿಗಿ, ಹಿಂದೂ ಪರ ಸಂಘಟನೆಯ ಮುಖಂಡರು ಸಹ ಮಾತನಾಡಿದರು. ರಾಜ್ಯದಲ್ಲಿ ಮತ್ತೆ ಈ ರೀತಿ ಪ್ರಕರಣಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯ ಸರ್ಕಾರಕ್ಕೆ ವಿವಿಧ ಹಿಂದೂಪರ ಸಂಘಟನೆಗಳು ಮನವಿ ಪತ್ರವನ್ನು ಸಲ್ಲಿಸಿದರು.