DistrictsKarnatakaKolarLatestMain Post

ಎಂಇಎಸ್ ಪುಂಡಾಟ ನಿಲ್ಲಲಿ: ಡಾಲಿ ಧನಂಜಯ್

Advertisements

ಕೋಲಾರ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಕೃತಿ ಹಾಳು ಮಾಡಿ ವಿಕೃತಿ ಮೆರೆಯುತ್ತಿರುವ ಎಂಇಎಸ್ ಪುಂಡರ ಪುಂಡಾಟ ನಿಲ್ಲಿಸಬೇಕು ಎಂದು ನಟ ಡಾಲಿ ಧನಂಜಯ್ ಹೇಳಿದರು.

ಕೋಲಾರದ ನರಸಾಪುರದಲ್ಲಿ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯವಾಗಿದೆ. ಮರಾಠರು, ಕನ್ನಡಿಗರು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇಂತಹ ಅನಾಹುತಗಳನ್ನು ಮಾಡುವ ಮೊದಲು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

ರಾಜ್ಯ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದಿಷ್ಟು ಪುಂಡರು ಮಾಡಿರುವ ಕೃತ್ಯದಿಂದ ಎಲ್ಲರಿಗೂ ತೊಂದರೆ ಆಗೋದು ಬೇಡ. ನಾನು ಕಲಾವಿದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಪ್ರತಿಭಟಿಸಬಲ್ಲೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಆಗಬಾರದು. ಹೋರಾಟದ ವಿಚಾರದಲ್ಲಿ ಚಲನಚಿತ್ರ ಮಂಡಳಿಯ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

Leave a Reply

Your email address will not be published.

Back to top button