ಹಳ್ಳಿ ಮೇಷ್ಟ್ರೇ.. ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ ಅಂತ ಬಿಂದಿಯಾ ಕರೆದಾಗ ನಮ್ ರವಿಮಾಮ ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದಿದ್ದು ನಿಮಗೆಲ್ಲ ಗೊತ್ತೆಯಿದೆ. ಈಗ ಹಳ್ಳಿಮೇಷ್ಟ್ರ ಹಾಡನ್ನ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಹಾಸ್ಟೆಲ್ ಹುಡುಗರು. ಕಳೆದೊಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಈ ಹಾಸ್ಟೆಲ್ ಹುಡುಗರ ಹಾವಳಿ ಜೋರಾಗಿದೆ. ಸಿನಿಮಾ ಲೋಕದಿಂದ ದೂರ ಉಳಿದು ಡೆಲ್ಲಿನಲ್ಲಿ ಕೂತಿದ್ದ ಪದ್ಮಾವತಿನಾ ವಾಪಾಸ್ ಗಾಂಧಿನಗರಕ್ಕೆ ಕರೆತಂದ ಹಾಸ್ಟೆಲ್ ಹುಡುಗರ ಮೇಲೆ ಅಭಿಮಾನವೂ ಹೆಚ್ಚಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿನಾ ಒಟ್ಟಿಗೆ ಸೇರಿಸಿರೋದು ಕ್ಯೂರಿಯಾಸಿಟಿ ಮೂಡಿಸಿದೆ. ಹಾಸ್ಟೆಲ್ ಲೈಫ್ ಹೇಗಿರುತ್ತೆ, ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು, ಏನೆನೆಲ್ಲಾ ಕಿತಾಪತಿ ಮಾಡ್ಬೋದು, ಕಿರಿಕ್ ಮಾಡುವ ವಾರ್ಡನ್‍ಗೆ ಹೇಗೆಲ್ಲಾ ಕಾಟ ಕೊಡ್ಬೋದು, ಯಾವ್ಯಾವ್ ರೀತಿ ರಾಜಕೀಯ ಮಾಡ್ಬೋದು ಅನ್ನೋದನ್ನ ತೋರಿಸುವುದಕ್ಕೆ ಬರುತ್ತಿರುವ ಹಾಸ್ಟೆಲ್ ಹುಡುಗರ ಮೇಲೆ ಕುತೂಹಲವೂ ದುಪ್ಪಟ್ಟಾಗಿದೆ. ಇದೆಲ್ಲದರ ಮಧ್ಯೆ ತಲೆಗೆ ಚಾಯ್ ಪೇ ಚರ್ಚೆಯಾಗಿರುವುದು `ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದರಾ ಈ ಹಾಸ್ಟೆಲ್ ಹುಡುಗರು ಅನ್ನೋದು.
Advertisement
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದಲ್ಲಿ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya,) ಬಣ್ಣ ಹಚ್ಚಿರುವುದು ಎಲ್ಲರಿಗೂ ತಿಳಿದಿದೆ. ನಾಗರಹಾವು ಸಿನಿಮಾ ನಂತರ ಬಣ್ಣದ ಜಗತ್ತಿನಿಂದ ಅಂತರಕಾಯ್ದುಕೊಂಡಿದ್ದ ಗೌರಮ್ಮ, ಹಾಸ್ಟೆಲ್ ಹುಡುಗರಿಗಾಗಿ ಮತ್ತೆ ಮುಖಕ್ಕೆ ಮೇಕಪ್ ಹಾಕ್ಕೊಂಡಿದ್ದಾರೆ. ಇದು ನನ್ನ ಕಂಬ್ಯಾಕ್ ಸಿನಿಮಾವಲ್ಲ ಬದಲಾಗಿ ಸೆಕೆಂಡ್ ಇನ್ನಿಂಗ್ಸ್‍ಗೆ ಟೀಸರ್ ಅಷ್ಟೇ ಎಂದಿರುವ ಲಕ್ಕಿಬೆಡಗಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪಾತ್ರದ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ, ಟ್ರೈಲರ್ ನೋಡಿದಾಗ ದಿಲ್ಲಿ ಮೇಡಂ ಲೆಕ್ಚರರ್ ರೋಲ್ ಪ್ಲೇ ಮಾಡಿರಬಹುದು ಎನ್ನುವ ಅನುಮಾನ ಮೂಡುತ್ತೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ಸ್ಯಾಂಡಲ್‍ವುಡ್ ಕ್ವೀನ್, ಕೆಮಿಸ್ಟ್ರಿ ಟೀಚರ್ರಾ? ಫಿಸಿಕ್ಸ್ ಲೆಕ್ಚರ್ರಾ ಅಥವಾ ಮ್ಯಾಥಾಮ್ಯಾಟಿಕ್ಸ್ ಹೇಳಿಕೊಡುವ ಮೇಡಂ ಹಾ ಹೀಗೊಂದು ಕುತೂಹಲದ ಪ್ರಶ್ನೆ ಎಲ್ಲರ ತಲೆಗೆ ಹುಳ ಬಿಟ್ಟಿದೆ. ಜೊತೆಗೆ ಈ ಹಾಸ್ಟೆಲ್ ಹುಡುಗರು `ದಿಲ್ಲಿ ಮೇಡಂಗೇನೆ ಸ್ಲೇಟು ಬಳಪ ತನ್ನಿ, ನಾವ್ ಪಾಠ ಮಾಡ್ತೀವಿ ಎಂದರಾ’? ಹೀಗೊಂದು ಸಂಶಯವೂ ಸಿನಿಮಾಪ್ರೇಮಿಗಳ ನಿದ್ದೆಗೆಡಿಸಿದೆ. ಇದಕ್ಕೆ ಏನ್ ಹೇಳ್ತೀರಿ ಅಂತ
Advertisement
Advertisement
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಯವರನ್ನು ಸಂಪರ್ಕ ಮಾಡಿದರೆ, `ರಮ್ಯಾ ಲೆಕ್ಚರ್ರಾ ಅಥವಾ ಸ್ಟುಡೆಂಟಾ ಅನ್ನೋದು ನೀವು ಥಿಯೇಟರ್‍ಗೆ ಬಂದ್ಮೇಲೇನೆ ಗೊತ್ತಾಗೋದು. ಸಾಕಷ್ಟು ಸರ್ಪೈಸ್ ಎಲಿಮೆಂಟ್ಸ್‍ಗಳನ್ನ ಇಟ್ಟಿದ್ದೇವೆ, ಇದೇ ಜುಲೈ 21ನೇ ತಾರೀಖು ನಮ್ಮ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಚಿತ್ರಮಂದಿರಕ್ಕೆ ಬಂದು ತಾವೆಲ್ಲರು ಸಿನಿಮಾ ನೋಡ್ಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
Advertisement
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಗೆ ಇದು ಡೆಬ್ಯೂ ಸಿನಿಮಾ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಜೀ ಕನ್ನಡದ ಬಹುತೇಕ ಧಾರವಾಹಿ ಹಾಗೂ ರಿಯಾಲಿಟಿ ಶೋಗಳ ಪ್ರೋಮೋ ಡೈರೆಕ್ಷನ್ ಮಾಡುವ ನಿತಿನ್, ಕಿಚ್ಚ ಸುದೀಪ್ ನಿರ್ಮಾಣದ ವಾರಸ್ಧಾರ ಸೀರಿಯಲ್ ಪ್ರೋಮೋ ಡೈರೆಕ್ಟ್ ಮಾಡಿದ್ದರು. ಇಂಟ್ರೆಸ್ಟಿಂಗ್ ಅಂದರೆ ಬಾದ್ ಷಾ ಕಿಚ್ಚ ಕೈನಲ್ಲೇ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರಮೋಷನಲ್ ಟೀಸರ್ ರಿಲೀಸ್ ಆಗಿದ್ದು. ಆಗ ತಾನೇ ವಿಕ್ರಾಂತ್ ರೋಣ ಸಿನಿಮಾ ಮುಗಿಸಿ ಬಿಗ್‍ಬಾಸ್‍ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ, ನಿರ್ದೇಶಕ ನಿತಿನ್ ಹಾಗೂ ನಿರ್ಮಾಪಕ ವರುಣ್‍ಗೆ ಕೈ ಜೋಡಿಸಿದರು. ಅಪ್ಪು ಫಸ್ಟ್ ಲುಕ್ ರಿಲೀಸ್ ಮಾಡಿ ಪವರ್ ತುಂಬಿದರೆ, ಕಿಚ್ಚ ಟೀಸರ್ ಅನಾವರಣ ಮಾಡಿಕೊಟ್ಟು ಹಾಸ್ಟೆಲ್ ಹುಡುಗರಿಗೆ ಬಲ ತುಂಬಿದರು. ಸುಮಾರು ವರ್ಷಗಳಿಂದ ನಿತಿನ್, ಪ್ರಜ್ವಲ್, ಅರವಿಂದ್, ರಾಕೇಶ್‍ನ ಹತ್ತಿರದಿಂದ ನೋಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಕ್ವಾಲಿಟಿ ಪ್ಲಸ್ ಕ್ವಾಂಟಿಟಿನಾ ನೋಡಿ ಕ್ಲೀನ್ ಬೋಲ್ಡ್ ಆದರು. ತಮ್ಮ ಪರಂವಃ ಬ್ಯಾನರ್ ಅಡಿಯಲ್ಲೇ ಸಿನಿಮಾನ ಪ್ರಸೆಂಟ್ ಮಾಡಲಿಕ್ಕೆ ಒಪ್ಪಿಕೊಂಡರು. ಅದ್ರಂತೆ, ಗ್ರ್ಯಾಂಡ್ ಆಗಿ ಸಿನಿಮಾನ ಬಿಡುಗಡೆ ಮಾಡ್ತಿದ್ದಾರೆ. 120ಕ್ಕಿಂತ ಅಧಿಕ ಚಿತ್ರಮಂದಿರಗಳಲ್ಲಿ ಕರುನಾಡಿನಾದ್ಯಂತ ತೆರೆಗೆ ತರುತ್ತಿದ್ದಾರೆ.
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಸಾಕಷ್ಟು ಸೌಂಡ್ ಮಾಡ್ತಿರುವ ಸಿನಿಮಾ. ಅಪ್ಪು, ದೀಪು ಸಾಥ್ ಕೊಟ್ಟಿದ್ದರಿಂದ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ನಲ್ಲಿ ಮಿಂಚಿದ್ದರಿಂದ ಸಿನಿಮಾಗೆ ಪ್ಲಸ್ ಆಗಿದ್ದೇನೋ ನಿಜ. ಆದರೆ, ಈ ಹಾಸ್ಟೆಲ್ ಹುಡುಗರು ಟೆಕ್ನಿಕಲಿ ಹೊಸ ಪ್ರಯೋಗ ಮಾಡಿದ್ದಾರೆ. ಸಿನಿಮಾ ವೆರೈಟ್ ಸ್ಟೈಲ್ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಕ್ಯಾಮೆರಾ ಹಾಗೂ ಸೌಂಡಿಂಗ್‍ನಲ್ಲಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇಡೀ ಕರ್ನಾಟಕ ತುಂಬೆಲ್ಲಾ ಸಂಚರಿಸಿ ಸುಮಾರು 6000 ಹುಡುಗರನ್ನ ಆಡಿಷನ್ ಮಾಡಿ, ಕೊನೆಗೆ 500 ಮಂದಿಯನ್ನ ಆಯ್ಕೆಮಾಡಿಕೊಂಡು `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರೀಕರಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳೇ ತುಂಬಿರುವ ಈ ಚಿತ್ರದಲ್ಲಿ ಪ್ರಜ್ವಲ್ ಎಂಬಾತ ಕಥೆನಾ ಡ್ರೈವ್ ಮಾಡ್ತಾನೆ. ರಾಕೇಶ್, ಶ್ರೀವತ್ಸ, ಮಂಜುನಾಥ್ ನಾಯಕ್, ನಿತಿನ್, ಅರವಿಂದ್, ಅಭಿಷೇಕ್ ದಾಸ್ ಸೇರಿದಂತೆ 40 ಮಂದಿ ಲೀಡ್ ರೋಲ್ನನಲ್ಲಿದ್ದಾರೆ. ಠಾಕೂರ್ ಪಾತ್ರದಲ್ಲಿ ರಿಷಬ್, ದ್ರಾಕ್ಷಿ ರೋಲ್‍ನಲ್ಲಿ ಪವನ್ ಕುಮಾರ್, ಕಬಾಬ್ ಕ್ಯಾರೆಕ್ಟರ್ ನಲ್ಲಿ ಶೈನ್ ಶೆಟ್ಟಿ, ಬಂಟಿಗೌಡನ ಅವತಾರದಲ್ಲಿ ದಿಗಂತ್ ಮಂಚಾಲೆ ಹೊಸ ಮೇನಿಯಾ ಸೃಷ್ಟಿಸಲಿದ್ದಾರೆ.
ಕ್ವಿರ್ಕಿ ಸ್ಟೈಲ್‍ನಲ್ಲಿ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕ್ಯಾರಿ ಮಾಡಲಾಗಿದೆ. ಪಾಪ್ ಕಲ್ಚರ್ ಒಳಗೊಂಡಿರೋ ಈ ಸಿನಿಮಾ ಮಂಗಳೂರು ಹಾಗೂ ಬೆಂಗಳೂರು ಬ್ಯಾಕ್‍ಡ್ರಾಪ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಟೋಟಲ್ 80 ರಿಂದ 100 ರಾತ್ರಿ ಹಾಸ್ಟೆಲ್ ನಲ್ಲೇ ಈ ಸಿನಿಮಾನ ಕ್ಯಾಪ್ಚರ್ ಮಾಡಲಾಗಿದೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್‍ಮೋಹರ್ ಫಿಲ್ಮಂಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಕಾಮಿಡಿ, ಥ್ರಿಲ್, ಸಸ್ಪೆನ್ಸ್ ಒಳಗೊಂಡಿರೋ ಈ ಸಿನಿಮಾ ಹಾಲಿವುಡ್ ಲೆವೆಲ್‍ನಲ್ಲಿ ನಿರ್ಮಾಣಗೊಂಡಿರುವುದು ಮತ್ತೊಂದು ವಿಶೇಷ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಃ ಬ್ಯಾನರ್ ಅಡಿ ಈ ಸಿನಿಮಾನ ಪ್ರಸೆಂಟ್ ಮಾಡಲಾಗ್ತಿದ್ದು, ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ತರಲಾಗ್ತಿದೆ.
Web Stories