ದಕ್ಷಿಣ ಭಾರತ ಎಂದರೇನೇ ಇಲ್ಲಿ ಸುತ್ತ ಸಮುದ್ರ. ಮೀನು ಖಾದ್ಯ ಪ್ರಿಯರ ಈ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಮೀನುಗಳನ್ನು ವಿಧವಿಧವಾದ ರೀತಿಯಲ್ಲಿ ಅಡುಗೆ ಮಾಡಿ ಬಡಿಸಲಾಗುತ್ತದೆ. ಒಂದೊಂದು ಬಗೆಯ ಮೀನಿನ ರುಚಿಯೂ ಒಂದೊಂದು ರೀತಿ. ನಾವಿಂದು ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿಯನ್ನು ಹೇಳಿಕೊಡುತ್ತೇವೆ. ಪ್ರತಿ ಸಲ ಸಾಮಾನ್ಯ ಮೀನಿನ ಖಾದ್ಯಗಳನ್ನು ಮಾಡುವವರು ಈ ಬಾರಿ ಏಡಿ ಕರಿಯನ್ನೂ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಎಣ್ಣೆ – 2 ಟೀಸ್ಪೂನ್
ಸೋಂಪು – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಜೀರಿಗೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ತುರಿದ ಶುಂಠಿ – 1 ಇಂಚು
ತುರಿದ ಬೆಳ್ಳುಳ್ಳಿ – 2
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 3
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಅರಿಶಿನ – 1 ಟೀಸ್ಪೂನ್
ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
ಏಡಿ – 1 ಕೆಜಿ
ತೆಂಗಿನ ಹಾಲು – 1 ಕಪ್
ನಿಂಬೆ ಹಣ್ಣು – 1
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ಮಾಡಿ ಕ್ರಿಸ್ಪಿ ಚಿಕನ್ ವಿಂಗ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಾಣಲೆ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ ಸೋಂಪು, ಸಾಸಿವೆ, ಜೀರಿಗೆ ಹಾಗೂ ಕರಿಬೇವಿನ ಎಲೆ ಸೇರಿಸಿ ಹುರಿಯಿರಿ.
* ಈಗ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿ ಸೇರಿಸಿ 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
* ಬಳಿಕ ಟೊಮೆಟೊ ಸೇರಿಸಿ ಅದು ಮೃದುವಾಗುವವರೆಗೆ ಹುರಿಯಿರಿ.
* ಈಗ ಅರಿಶಿನ, ತೆಂಗಿನ ಹಾಲು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಕುದಿಸಿಕೊಳ್ಳಿ.
* ಈಗ ಏಡಿಗಳನ್ನು ಸೇರಿಸಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಸುಮಾರು 10 ನಿಮಿಷಗಳ ವರೆಗೆ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಆಫ್ ಮಾಡಿ.
* ಈಗ ಏಡಿ ಸಾರಿಗೆ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ