ನವದೆಹಲಿ: 30 ವರ್ಷದ ಮಹಿಳೆಯೊಬ್ಬರು ತನ್ನ ಪತಿ, 2 ವರ್ಷದ ಮಗುವಿನ ಮುಂದೆಯೇ ಕೊಲೆಯಾಗಿರುವ ಮನಕಲಕುವಂತಹ ಘಟನೆ ಉತ್ತರ ಪಶ್ಚಿಮ ದೆಹಲಿ ರೋಹಿಣಿಯಲ್ಲಿ ನಡೆದಿದೆ.
ಪ್ರಿಯಾ ಮೆಹ್ರಾ ಕೊಲೆಯಾದ ಗೃಹಿಣಿ. ಬುಧವಾರ ನಸುಕಿನ ಜಾವ 4 ಗಂಟೆಗೆ ಗುರುದ್ವಾರದಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Advertisement
ಗುರುದ್ವಾರದಿಂದ ರೋಹಿಣಿಯಲ್ಲಿರುವ ತಮ್ಮ ಮನೆಗೆ ಪತಿ ಪಂಕಜ್ ಜೊತೆ ಮಾರುತಿ ರಿಟ್ಜ್ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ವೇಗವಾಗಿ ಬಂದು ಅವರ ಕಾರನ್ನು ಹಿಂದಿಕ್ಕಿ ಅವರ ಮುಂದೆ ಬಂದಿದ್ದಾರೆ. ನಂತರ ಏಕಾಏಕಿ ಪಂಕಜ್ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಡ್ರೈವರ್ ಸೀಟ್ ನಲ್ಲಿ ಪಂಕಜ್ ಕಾರಿನಲ್ಲಿ ಕೆಳಗೆ ಬಗ್ಗಿದ್ದಾರೆ. ಆದರೆ ಪತ್ನಿ ಪ್ರಿಯಾಗೆ ಕುತ್ತಿಗೆ ಮತ್ತು ಮುಖಕ್ಕೆ ಗುಂಡುಗಳು ಬಿದಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಪ್ರಿಯಾ ಸಾವನ್ನಪ್ಪಿದ್ದಾರೆ. ಆದರೆ ಪಂಕಜ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಡಿಸಿಪಿ ಮಿಲಿಂದ್ ದುಂಬೇರೆ ಅವರು ತಿಳಿಸಿದರು.
Advertisement
Advertisement
ಮೂವರು ದುಷ್ಕರ್ಮಿಗಳು ನನ್ನನ್ನು ಗುರಿಯಾಗಿಕೊಂಡು ಗುಂಡು ಹಾರಿಸಿದರು. ಆದರೆ ನಾನು ತಪ್ಪಿಸಿಕೊಂಡೆ. ಆದರೆ ನನ್ನ ಪತ್ನಿ ಪ್ರಿಯಾಗೆ ಗಂಡೇಟು ಬಿದ್ದು, ಮೃತಪಟ್ಟಿದ್ದಾಳೆ ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.
Advertisement
ಬಡ್ಡಿದಾರರ ಬಳಿ ಸುಮಾರು 5 ಲಕ್ಷ ರೂ. ಸಾಲವನ್ನು ಪಡೆದಿದ್ದೆ. ಆದರೆ ಅದನ್ನು ಹಿಂದಿರುಗಿಸಲು ತಡವಾಗಿದ್ದರಿಂದ ಬಡ್ಡಿ ಕೊಟ್ಟವರು ಚಕ್ರ ಬಡ್ಡಿ ಸೇರಿಸಿ 40 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ನೀಡಲು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಪಂಕಜ್ ನಮ್ಮ ಬಳಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.