ದಾವಣಗೆರೆ: ದೆಹಲಿಯಲ್ಲಿ ನಡೆಯುವ 2020ನೇ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್‍ಗೆ ನಮ್ಮ ರಾಜ್ಯದ ದಾವಣಗೆರೆ ವಿದ್ಯಾರ್ಥಿನಿ ಲೀಡರ್ ಆಗಿ ಸೆಲೆಕ್ಟ್ ಆಗಿದ್ದಾರೆ.
ಇದೇ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮಾ ಹೆಗ್ಡೆ ಎನ್‍ಸಿಸಿ ಪರೇಡ್ ಲೀಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹರಿಹರ ಪಟ್ಟಣದ ನಿವಾಸಿಗಳಾದ ಡಾ.ಪ್ರವೀಣ್ ಹೆಗ್ಡೆ- ಬಿಂದು ಹೆಗ್ಡೆ ದಂಪತಿ ಪುತ್ರಿ ಶ್ರೀಷ್ಮಾ ಹೆಗ್ಡೆ, ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Advertisement
Advertisement
ಈಗ ಇವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಎನ್‍ಸಿಸಿ ಪೆರೇಡ್‍ಗೆ ಆಯ್ಕೆಯಾಗಿದ್ದು, 2020ರ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್ ಲೀಡ್ ಮಾಡಲಿದ್ದಾರೆ. 2017 ದ ದೆಹಲಿಯ ಗಣರಾಜ್ಯೋತ್ಸದ ಪರೇಡ್‍ನಲ್ಲಿ ಕೊಡಗಿನ ಐಶ್ವರ್ಯಾ ಲೀಡರ್ ಆಗಿದ್ದರು. ಈಗ 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‍ಸಿಸಿ ಯುವತಿಗೆ ಅವಕಾಶ ದೊರೆತಿದೆ.