ರಾಮನಗರ: ನಮಗೆ ಕೊರೊನಾ ಟೆಸ್ಟ್ ಮಾಡಲು ಬಿಜೆಪಿಯವರು ವೈದ್ಯರನ್ನು ಕಳುಹಿಸಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಅಂತ ತೋರಿಸಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೊಡ್ಡ ಆಲಹಳ್ಳಿಯಲ್ಲಿ ಮಾತನಾಡಿದ ಅವರು, ರಾತ್ರಿ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ಅಧಿಕಾರಿಗಳನ್ನು ಕಳಿಸಿದ್ದರು. ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗೊತ್ತಿಲ್ಲ, ನನ್ನ ಹತ್ತಿರ ಹತ್ತು ಜನರ ವೈದ್ಯರ ತಂಡ ಇದೆ ಅಂತಾ. ನನ್ನನ್ನು ನೋಡಿದ್ರೆ ಕೊರೊನಾ ಲಕ್ಷಣಗಳು ಇದೆ ಅನಿಸುತ್ತಾ? ನಿನ್ನೆ ಸಮರ್ಥವಾಗಿ ನಡೆದಿದ್ದೇನೆ, ಎಲ್ಲೂ ಕೂಡ ಸುಸ್ತಾಗಿಲ್ಲ. ನನಗೆ ಟೆಸ್ಟ್ ಮಾಡಿ ಪಾಸಿಟಿವ್ ಅಂತಾ ಹೇಳಿದರೆ, ಪಾದಯಾತ್ರೆ ಹತ್ತಿಕ್ಕಬಹುದು ಅಂತಾ ತಿಳಿದಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಿದ್ದಾರೆ: ಡಿ.ಕೆ ಸುರೇಶ್
Advertisement
Advertisement
ರಾಜ್ಯದಲ್ಲಿ ಕರ್ಫ್ಯೂ ಇರುವುದರಿಂದ ಸಾಮಾನ್ಯ ಜನರು ಕಷ್ಟಪಡುವ ಸ್ಥಿತಿ ಇದೆ. ಈ ಕರ್ಫ್ಯೂವನ್ನು ತೆಗೆಯಬೇಕು. ವಿಮಾನ ನಿಲ್ದಾಣದಲ್ಲಿ ದಂಧೆ ಮಾಡುತ್ತಿದ್ದಾರೆ. ಇಬ್ಬರು ವಿದೇಶದಿಂದ ಬಂದರೆ, ಒಬ್ಬರಿಗೆ ಪಾಸಿಟಿವ್ ತೋರಿಸುತ್ತಿದ್ದಾರೆ. ಕೊರೊನಾ ಹೆಸರಿನಲ್ಲಿ ದುಡ್ಡು ಹೊಡೆದಿದ್ದು ಸಾಕು ಎಂದು ಟೀಕಿಸಿದ್ದಾರೆ.
Advertisement
ನನ್ನ ಕಾಂಗ್ರೆಸ್‌ನವರು ರೇಪ್ ಮಾಡ್ತಾ ಇದಾರೆ ಅಂತಾ ಆರಗ ಜ್ಞಾನೇಂದ್ರ ಹೇಳಿದ್ದರು. ಈಗ ಕ್ಷಮೆ ಕೇಳಿ ಅಂತಾ ಹೇಳುತ್ತಿದ್ದಾರೆ. ಆತ ಅಜ್ಞಾನ ಆರಗ ಜ್ಞಾನೇಂದ್ರ. ಬಿಜೆಪಿ ಅವರಿಗೆ ನನ್ನ ನೆನಯದೇ ಇದ್ದರೆ ನಿದ್ದೆ ಬರಲ್ಲಾ. ನಾನು ಕೂತರು, ನಿಂತರು ಟ್ರೋಲ್ ಮಾಡುತ್ತಾರೆ. ಅವರು ಟ್ರೋಲ್ ಮಾಡಿಕೊಳ್ಳಲಿ ಬಿಡಿ, ನಾನು ತಲೆಕೆಡಿಸಿಕೊಳ್ಳಲ್ಲ. ಈ ಪಾದಯಾತ್ರೆ 10 ದಿನವೂ ನಡೆಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಯತ್ನಾಳ್ ಪ್ರಶ್ನೆ
Advertisement
ಸಿಎಂ ಅಕ್ಕ-ಪಕ್ಕ ಕೂತವರಿಗೆ ಪಾಸಿಟಿವ್ ಬಂದಿದೆ. ಸಿಎಂಗೆ ಯಾಕೆ ಟೆಸ್ಟ್ ಮಾಡಿಲ್ಲ. ಅವರಿಗೆ ಲಕ್ಷಣಗಳು ಇಲ್ವಾ? ಇದೇ ಬಿಜೆಪಿ ಅವರು ರಾಜಕೀಯಕ್ಕಾಗಿ ಮಾಡುತ್ತಿರುವ ಡ್ರಾಮ. ನಿನ್ನೆ ಕರ್ಫ್ಯೂ ನೆಪದಲ್ಲಿ, ನಮ್ಮ ಕಾರ್ಯಕರ್ತರ ಬಸ್‌ಗಳನ್ನು ಹಿಡಿದಿದ್ದರು. ಇಂದು ಕರ್ಫ್ಯೂ ಇಲ್ಲ, ಪಾದಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ ಬರ್ತಾರೆ ಎಂದು ತಿಳಿಸಿದ್ದಾರೆ.