ಲಂಡನ್: ಅಮೆರಿಕ ಮತ್ತು ಇರಾನ್ (US Iran War) ನಡುವಿನ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ದಿಢೀರ್ ಜಿಗಿತ ಕಂಡಿದ್ದು, ಪ್ರತಿ ಬ್ಯಾರಲ್‌ಗೆ 96 ಡಾಲರ್ ತಲುಪುವ ಮೂಲಕ ಕಳೆದ 6 ವಾರಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ.
ಮಧ್ಯಪ್ರಾಚ್ಯದಲ್ಲಿ (Middle East) ಯುದ್ಧದ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬ್ರೆಂಟ್ ಕ್ರೂಡ್ (Brent Crude) ತೈಲ ದರವು ಪ್ರತಿ ಬ್ಯಾರಲ್‌ಗೆ 96 ಡಾಲರ್ ಗಡಿಯನ್ನು ದಾಟಿದ್ದು, ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಜಾಗತಿಕ ರಾಜಕೀಯ ಸಂಘರ್ಷಗಳು ಶಮನಗೊಳ್ಳದಿದ್ದರೆ ತೈಲ ಬೆಲೆ ಶೀಘ್ರದಲ್ಲೇ 100 ಡಾಲರ್ ಗಡಿ ದಾಟಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದು, ಇದು ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ವಾರ್ – ಈಗ ಜೆನೆರಿಕ್ ಔಷಧಿಗಳ ಮೇಲೆ 200% ಸುಂಕ
Newly released footage of American forces conducting airstrikes on Iranian targets overnight, hitting construction equipment and small boats. pic.twitter.com/0VPZxzPVkR
— OSINTtechnical (@Osinttechnical) July 23, 2026
ಜಗತ್ತಿನ ಸುಮಾರು 20% ನಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ತೈಲ ಟ್ಯಾಂಕರ್‌ಗಳನ್ನು ತಡೆದು ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಸಾಲಕ್ಕಾಗಿ ಅಮೆರಿಕ ಮುಂದೆ ಮತ್ತೆ ಕೈಚಾಚಿದ ಪಾಕಿಸ್ತಾನ
ಇರಾನ್ ಮತ್ತು ಅಮೆರಿಕ ಮಧ್ಯೆ ಕದನ ವಿರಾಮ ಘೋಷಣೆಯಾಗಿ ಮಾತುಕತೆ ಆರಂಭವಾದ ಬಳಿಕ ಜೂನ್ ಕೊನೆಯ ವಾರದಲ್ಲಿ ಕಚ್ಚಾ ತೈಲ ದರ 70 ಡಾಲರ್‌ಗೆ ಇಳಿಕೆಯಾಗಿತ್ತು.
ಭಾರತವು ತನ್ನ ಕಚ್ಚಾ ತೈಲದ ಶೇ. 80ಕ್ಕೂ ಹೆಚ್ಚಿನ ಅವಶ್ಯಕತೆಗೆ ಆಮದನ್ನೇ ನೆಚ್ಚಿಕೊಂಡಿದೆ. ತೈಲ ಬೆಲೆ ಬ್ಯಾರಲ್‌ಗೆ 96 ಡಾಲರ್‌ಗೆ ಏರಿಕೆಯಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

