– ದೆಹಲಿಗೆ ದೌಡಾಯಿಸಿದ ಬಿವೈವಿ, ಅಶೋಕ್, ಹೈಕಮಾಂಡ್‌ಗೆ ವಿವರಣೆ
ಬೆಂಗಳೂರು: ಅಡ್ಡಮತದಾನ ಪ್ರಕರಣ ಬಿಜೆಪಿಯಲ್ಲಿ (BJP) ಕಿಚ್ಚು ಹಚ್ಚಿದೆ. ಅತ್ತ ಧರ್ಮಸ್ಥಳದಲ್ಲಿ ಶಾಸಕರಿಗೆ ಧರ್ಮ ಪರೀಕ್ಷೆಗೂ ಸಿದ್ಧತೆ ನಡೆದಿದ್ದು, ಆಣೆ ಪ್ರಮಾಣಕ್ಕೆ ಪಕ್ಷದಲ್ಲೇ ಪರ ವಿರೋಧ ಎದುರಾಗಿದೆ. ಹಿರಿಯರು ಧರ್ಮಸ್ಥಳ(Dharmasthala) ಪ್ರಸ್ತಾಪ ಬೇಡ ಅಂದಿದ್ದಾರೆ. ಈ ಮಧ್ಯೆ ಅಡ್ಡ ಮತ ವಿವರಣೆ ಕೊಡಲು ವಿಜಯೇಂದ್ರ ಹಾಗೂ ಅಶೋಕ್ ದೆಹಲಿಗೆ ತೆರಳಿದ್ದಾರೆ.
ಬಿಜೆಪಿಯಲ್ಲಿ ಅಡ್ಡ ಮತ ಪ್ರಕರಣ ಒಂದು ಕಡೆ ಮುಜುಗರ ಸೃಷ್ಟಿಸಿದ್ದರೆ, ಇನ್ನೊಂದ ಕಡೆ ಧರ್ಮಸ್ಥಳ ಜ್ವಾಲೆಯೂ ಶುರುವಾಗಿದೆ. ಅಡ್ಡ ಮತ ಹಾಕಿದವರ ಪತ್ತೆಗೆ ರಾಜ್ಯ ನಾಯಕರ ಕ್ರಮಗಳಿಂದ ಹೈಕಮಾಂಡ್‌ಗೆ (BJP HighCommand) ಸಮಾಧಾನ ತಂದಿಲ್ಲ. ಸಿಟಿ ರವಿ ನೇತೃತ್ವದ ಸಮಿತಿಯೂ ಅಡ್ಡ ಮತ ಹಾಕಿದವರನ್ನು ಹುಡುಕುತ್ತೆ ಅನ್ನೋ ವಿಚಾರದಲ್ಲಿ ನಿರೀಕ್ಷೆ ಮೂಡಿಸಿಲ್ಲ. ಹೀಗಾಗಿ ಧರ್ಮಸ್ಥಳದಲ್ಲಿ ಧರ್ಮ ಪರೀಕ್ಷೆ ಮಾಡಿಸುವ ದಾಳವನ್ನು ವಿಜಯೇಂದ್ರ ಉರುಳಿಸಿದ್ದರು. ಇದನ್ನೂ ಓದಿ: ದುಡ್ಡು ಕೊಟ್ಟು ಕರೆತಂದ ಕಾಂಗ್ರೆಸ್ ಶಾಸಕರಿಂದಲೇ ಅಧಿಕಾರಕ್ಕೆ ಬಂದ್ವಿ, ಅವರಿಂದಲೇ ಪಕ್ಷ ಹಾಳಾಯ್ತು: ಈಶ್ವರಪ್ಪ
ಇದೇ ಗುರುವಾರ ಅಥವಾ ಶುಕ್ರವಾರ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಶಾಸಕರಿಂದ ಆಣೆ ಮಾಡಿಸಿ, ಸತ್ಯ ಬಯಲು ಮಾಡಲು ವಿಜಯೇಂದ್ರ, ಅಶೋಕ್ ಮುಂದಾಗಿದ್ದಾರೆ. ಆದರೆ ಇದಕ್ಕಿನ್ನೂ ಹೈಕಮಾಂಡ್ ಒಪ್ಪಿಲ್ಲ. ಈ ನಡುವೆ ಪಕ್ಷದ ಹಿರಿಯರು ಧರ್ಮಸ್ಥಳ ಆಣೆಗೆ ವಿರೋಧಿಸಿದ್ದಾರೆ. ಅಡ್ಡ ಮತದಂಥ ಕೀಳು ರಾಜಕೀಯಕ್ಕೆ ಧರ್ಮಸ್ಥಳ ಪಾವಿತ್ರ್ಯತೆಗೆ ಧಕ್ಕೆ ತರೋದು ಬೇಡ ಅಂತ ಹಿರಿಯರು ಆಕ್ಷೇಪಿಸಿದ್ದಾರೆ.
ಇತ್ತ ಕೆಲ ಶಾಸಕರು ಧರ್ಮಸ್ಥಳ ಆಣೆಗೆ ಒಕೆ ಅಂದಿದ್ದಾರೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತಾಡಿ, ವಿಜಯೇಂದ್ರ ತೀರ್ಮಾನ ಸಮಂಜಸವಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಅಪಾರ ನಂಬಿಕೆಯಿದೆ. ಬಿಜೆಪಿ ಅಧ್ಯಕ್ಷರು ಎಲ್ಲಿಗೆ ಕರೆದರೂ ನಾವೆಲ್ಲ ಬರುತ್ತೇವೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ತೀರ್ಮಾನಕ್ಕೆ ನಾನು ಬದ್ಧ ಅಂದಿದ್ದಾರೆ. ಇನ್ನು ಬಿಜೆಪಿಯ ಧರ್ಮಸ್ಥಳ ಆಣೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬಿಜೆಪಿಯವರು ರಾಮನ ಹೆಸರಲ್ಲೇ ಲೂಟಿ ಮಾಡುವವರು. ಅಂಥವರು ಮಂಜುನಾಥಸ್ವಾಮಿ ಹೆಸರಲ್ಲಿ ಸತ್ಯ ಹೇಳ್ತಾರಾ ಅಂತ ಕಾಲೆಳೆದಿದ್ದಾರೆ.
ಈ ಮಧ್ಯೆ ಅಡ್ಡ ಮತ ಪ್ರಕರಣದ ವಿವರಣೆ ಕೊಡಲು ಇಂದು ವಿಜಯೇಂದ್ರ ಹಾಗೂ ಆರ್ ಅಶೋಕ್ ದೆಹಲಿಗೆ ತೆರಳಿದ್ದಾರೆ. ನಾಳೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಭೇಟಿ ಮಾಡಿ, ಇಬ್ಬರೂ ವಿವರಣೆ ಕೊಡಲಿದ್ದಾರೆ. ಇನ್ನು ಧರ್ಮಸ್ಥಳ ಆಣೆಗೂ ಅನುಮತಿ ಕೇಳಲಿದ್ದಾರೆ. ರಾಜ್ಯದಲ್ಲಿ ಮುಜುಗರಕ್ಕೆ ಕಾರಣವಾದ ಅಡ್ಡ ಮತ ಬಗ್ಗೆ ಹೈಕಮಾಂಡ್ ನಾಯಕರ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: 7.5% ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡ್ತೀನಿ, 2028ರಲ್ಲಿ ನಾನೇ ಮಂತ್ರಿ: ರಮೇಶ್ ಜಾರಕಿಹೊಳಿ
