ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅತ್ಯಂತ ಆಪ್ತ ಒಡನಾಡಿ ಹಾಗೂ ಹಿರಿಯ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ಹಠಾತ್ ನಿಧನ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉಕ್ರೇನ್ ಪ್ರವಾಸ ಮುಗಿಸಿ ಮರಳಿದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಟ್ರಂಪ್ ಅವರ ‘ಮಾಗಾ’ (MAGA – Make America Great Again) ಬೆಂಬಲಿಗರು ಹತ್ಯೆಯ(Assassination) ಶಂಕೆ ಹಾಗೂ ಹಲವು ಪಿತೂರಿ ಸಿದ್ಧಾಂತಗಳ ಬಗ್ಗೆ ಈಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೆನೆಟರ್ ಲಿಂಡ್ಸೆ ಗ್ರಹಾಂ(Lindsey Graham) ಅವರು ಜುಲೈ 11ರ ಶನಿವಾರ ಸಂಜೆ ವಾಷಿಂಗ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ಆದರೆ ಲಿಂಡ್ಸೆ ಗ್ರಹಾಂ ಅವರ ಸಾವಿನ ಹಿಂದೆ ರಷ್ಯಾ ಅಥವಾ ಇರಾನ್ ಕೈವಾಡವಿರಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಅಮೆರಿಕ-ಇರಾನ್ ನಡುವೆ ಭೀಕರ ದಾಳಿ – ಕಚ್ಚಾ ತೈಲ ಬೆಲೆ ಶೇ. 4ರಷ್ಟು ಏರಿಕೆ
ತಮ್ಮ ಆಪ್ತ ಮಿತ್ರನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನಾನು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಹಾಗೂ ಸೆನೆಟರ್‌ಗಳಲ್ಲಿ ಒಬ್ಬರಾದ ಲಿಂಡ್ಸೆ ಗ್ರಹಾಂ ಇನ್ನಿಲ್ಲ! ಅವರು ಯಾವಾಗಲೂ ದೇಶಕ್ಕಾಗಿ ಶ್ರಮಿಸುತ್ತಿದ್ದ ನಿಜವಾದ ಅಮೆರಿಕನ್ ದೇಶಭಕ್ತ. ಲಿಂಡ್ಸೆ ಅವರ ಅನುಪಸ್ಥಿತಿ ನಮ್ಮನ್ನು ಬಹುವಾಗಿ ಕಾಡಲಿದೆ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕುವೈತ್, ಬಹರೇನ್ ಮೇಲೆ ಮತ್ತೆ ದಾಳಿ – ಜಲಮಾರ್ಗ ಬಂದ್ ಎಂದ ಇರಾನ್
