Connect with us

Districts

ಕೊಟ್ಟೂರು ಶ್ರೀ ಕಾಮ ಪುರಾಣ – ಜಾಮೀನು ರಹಿತ ವಾರೆಂಟ್ ಜಾರಿ

Published

on

ಕೊಪ್ಪಳ: ಪಬ್ಲಿಕ್ ಟಿವಿ ಬಯಲಿಗೆ ತಂದಿದ್ದ ಗಂಗಾವತಿಯ ಕಾಮಿ ಸ್ವಾಮೀಜಿಯ ಲೈಂಗಿಕ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದೀಗ ಸ್ವಾಮೀಜಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಕೊಪ್ಪಳದ ಗಂಗಾವತಿಯ ಕಲ್ಮಠದ ಪೀಠಾಧಿಪತಿಯಾಗಿದ್ದ ಕೊಟ್ಟೂರೇಶ್ವರ ಸ್ವಾಮೀಯ ಕಾಮ ಪುರಾಣವನ್ನು ಪಬ್ಲಿಕ್ ಟಿವಿ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿಗೆ ಕಕ್ಕಾಬಿಕ್ಕಿಯಾಗಿದ್ದ ಕೊಟ್ಟೂರು ಸ್ವಾಮಿ, ಮಠ ಬಿಟ್ಟು ಪರಾರಿಯಾಗಿದ್ದನು. ನಂತರ ಕೆಲ ದಿನಗಳು ಕಳೆದ ಬಳಿಕ ರೌಡಿಗಳ ಜೊತೆ ಮಠಕ್ಕೆ ರೀ-ಎಂಟ್ರಿ ನೀಡಿದ್ದನು. ಇದನ್ನು ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

ಸ್ವಾಮೀಜಿಯ ಕಾಮಪುರಾಣವನ್ನು ಕಂಡವರೆಲ್ಲಾ ಆತನ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಸ್ವಾಮಿ ಮಾತ್ರ ತಾನು ಏನೂ ಮಾಡಿಲ್ಲ ಎನ್ನುವಂತೆ ಕೋರ್ಟ್ ಮುಖಾಂತರ ಇಂಜೆಕ್ಷನ್ ನೋಟಿಸ್ ತಂದು ತನ್ನ ಆಟವನ್ನು ಬಯಲು ಮಾಡಿದವರ ಮತ್ತು ಸುದ್ದಿ ಮಾಡಿದ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲು ಮಾಡುತ್ತಿದ್ದನು. ಇದನ್ನು ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

ಇದೀಗ ನ್ಯಾಯಾಲಯವು ಸ್ವಾಮೀಜಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಸತತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಗಂಗಾವತಿ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ. 2017ರಲ್ಲಿ ಕೊಟ್ಟೂರು ಶ್ರೀಗಳ ವಿರುದ್ಧ ಕಾರ್ ಡ್ರೈವರ್ ಮಲ್ಲಯ್ಯ ದೂರು ನೀಡಿದ್ದರು. ಇದನ್ನು ಓದಿ: ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಕಲ್ಮಠ ಸ್ವಾಮಿ ಅಂದು ನಾನವನಲ್ಲ..ನಾನವನಲ್ಲ-ಇಂದು ನಾನೇ.. ನಾನೇ.. ಅಂದ

ಸ್ವಾಮೀಜಿ ಮಹಿಳೆ ಜೊತೆ ಇರುವ ವಿಡಿಯೋವನ್ನು ಬಹಿರಂಗ ಮಾಡಿದಕ್ಕಾಗಿ ಕೊಟ್ಟೂರು ಶ್ರೀ ಡ್ರೈವರ್ ಮೇಲೆ ಕೊಲೆ ಬೆದರಿಕೆ ಹಾಕಿದ್ದನು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದ್ದಕ್ಕೆ ಶ್ರೀ ಪಬ್ಲಿಕ್ ಟಿವಿ ಮೇಲೂ ಪ್ರಕರಣ ದಾಖಲಿಸಿದ್ದನು. ಇದೀಗ ನ್ಯಾಯಾಲಯವು ಸ್ವಾಮೀಜಿಯನ್ನು ಬಂಧಿಸಲು ಆದೇಶ ಹೊರಡಿಸಿದೆ.

https://www.youtube.com/watch?v=3lbgvaviytI