ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ 8 ಹೈಕೋರ್ಟ್‍ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಿದ್ದು, ಜೊತೆಗೆ 5 ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸು ಮಾಡಿದೆ.
ಸೆಪ್ಟೆಂಬರ್ 16ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿರುವ ಐವರು ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳಾಗಿದ್ದು, ಇತರ ಹೈಕೋರ್ಟ್‍ಗೆ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ. ಎಂಟು ಮಂದಿ ಸದ್ಯ ನ್ಯಾಯಾಧೀಶರಾಗಿದ್ದು, ಅವರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಪದೊನ್ನತಿ ಮಾಡಲಾಗುತ್ತಿದೆ.
Advertisement
Advertisement
ವರ್ಗಾವಣೆಗೆ ಶಿಫಾರಸುಗೊಂಡವರು
ನ್ಯಾಯಮೂರ್ತಿ ಅಕಿಲ್ ಕುರೇಶಿ ತ್ರಿಪುರದಿಂದ ರಾಜಸ್ಥಾನಕ್ಕೆ, ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ರಾಜಸ್ಥಾನದಿಂದ ತ್ರಿಪುರ, ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ ಮಧ್ಯಪ್ರದೇಶದಿಂದ ಹಿಮಾಚಲ ಪ್ರದೇಶಕ್ಕೆ, ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಆಂಧ್ರ ಪ್ರದೇಶದಿಂದ ಛತ್ತೀಸ್‍ಗಢ, ನ್ಯಾಯಮೂರ್ತಿ ಬಿಸ್ವನಾಥ್ ಸೋಮಡ್ಡರ್ ಮೇಘಾಲಯದಿಂದ ಸಿಕ್ಕಿಂಗೆ ವರ್ಗಾವಣೆಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ: ಬಿ.ಕೆ.ಹರಿಪ್ರಸಾದ್
Advertisement
Advertisement
ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪದೊನ್ನತಿಗೆ ಶಿಫಾರಸುಗೊಂಡವರು
ನ್ಯಾಯಮೂರ್ತಿ ರಾಜೇಶ್ ಬಿಂದಾಲ್- ಅಲಹಾಬಾದ್ ಹೈಕೋರ್ಟ್, ನ್ಯಾಯಮೂರ್ತಿ ಪ್ರಕಾಶ್ ಶ್ರೀವತ್ಸ- ಕೋಲ್ಕತ್ತಾ ಹೈಕೋರ್ಟ್, ನ್ಯಾಯಮೂರ್ತಿ ಪಿಕೆ ಮಿಶ್ರಾ- ಆಂಧ್ರಪ್ರದೇಶ, ಹೈಕೋರ್ಟ್, ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ- ಕರ್ನಾಟಕ ಹೈಕೋರ್ಟ್, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ- ತೆಲಂಗಾಣ ಹೈಕೋರ್ಟ್, ನ್ಯಾಯಮೂರ್ತಿ ಅರವಿಂದ ಕುಮಾರ್- ಗುಜರಾತ್ ಹೈಕೋರ್ಟ್, ನ್ಯಾಯಮೂರ್ತಿ ಆರ್.ವಿ.ಮಾಲಿಮಠ- ಮಧ್ಯಪ್ರದೇಶ ಹೈಕೋರ್ಟ್, ನ್ಯಾಯಮೂರ್ತಿ ರಂಜಿತ್ ವಿ ಮೋರ್- ಮೇಘಾಲಯ ಹೈಕೋರ್ಟ್ ಗೆ ಶಿಫಾರಸುಗೊಂಡಿದ್ದಾರೆ.