Connect with us

Districts

ಕಾಂಗ್ರೆಸ್ ಮಾಜಿ ಸಚಿವ ಜಿ. ರಾಮಕೃಷ್ಣ ಇನ್ನಿಲ್ಲ

Published

on

ಕಲಬುರಗಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಜಿ.ರಾಮಕೃಷ್ಣ ಇಂದು ನಿಧನರಾಗಿದ್ದಾರೆ.

ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ರಾಮಕೃಷ್ಣ ಅವರು ಬಳಲುತ್ತಿದ್ದರಿಂದ ಮನೆಯಲ್ಲಿದ್ದರು. ಇಂದು ಕಲಬುರಗಿಯ ನಿವಾಸದಲ್ಲಿ ರಾಮಕೃಷ್ಣ ಅವರು ನಿಧನರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ರಾಮಕೃಷ್ಣ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ರಾಮಕೃಷ್ಣ ಅವರ ನಿಧನದಿಂದ ಮನೆಯಲ್ಲಿ ದು:ಖ ಮಡುಗಟ್ಟಿದೆ. ವಿಷಯ ತಿಳಿದ ಗಣ್ಯರು ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾಮಕೃಷ್ಣ ಅವರಿಗೆ 84 ವರ್ಷ ವಯಸ್ಸು ಆಗಿತ್ತು.

Click to comment

Leave a Reply

Your email address will not be published. Required fields are marked *