ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ (Karnataka MLC Polls) ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿ.ಕೆ.ಹರಿಪ್ರಸಾದ್ ಸೇರಿ ನಾಲ್ವರಿಗೆ ಟಿಕೆಟ್ ನೀಡಿದೆ.
ಬಿ.ಕೆ.ಹರಿಪ್ರಸಾದ್ (B.K.Hariprasad), ಪಿ.ವಿ.ಮೋಹನ, ತಿಪ್ಪಣ್ಣ ಕಮಕನೂರು, ಮಳವಳ್ಳಿ ಶಿವಣ್ಣಗೆ ‘ಕೈ’ ಟಿಕೆಟ್ ಘೋಷಿಸಿದೆ. ಇದನ್ನೂ ಓದಿ: ಡಿಸಿಎಂ ಆಗಿ ಪರಮೇಶ್ವರ್ & 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ಸ್ವೀಕಾರ

ಹರಿಪ್ರಸಾದ್, ಕಮಕನೂರು ಮರು ಆಯ್ಕೆ ಆಗಲಿದ್ದಾರೆ. ಮಳವಳ್ಳಿ ಶಿವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು. ಹೈಕಮಾಂಡ್‌ನಿಂದ ಪಿ.ವಿ.ಮೋಹನ್ ಹೆಸರು ಶಿಫಾರಸಾಗಿದೆ.
ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ಒಟ್ಟು 135 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ 112 ಮತಗಳೊಂದಿಗೆ ತನ್ನ ನಾಲ್ವರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು.
