ಲಕ್ನೋ: ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದ ಯುವ ಜೋಡಿಯ ಬದುಕು ಲಕ್ನೋ ಕೋಚಿಂಗ್ ಸೆಂಟರ್(Coaching center) ಅಗ್ನಿ ದುರಂತದಲ್ಲಿ(Lucknow) ದುರಂತ (Fire Accident) ಅಂತ್ಯ ಕಂಡಿದೆ.
ಮುಂದಿನ ವರ್ಷ ಮದುವೆಯಾಗಬೇಕಿದ್ದ ನಿಲೇಶ್ ಕುಮಾರ್ ಮತ್ತು ಅನಾಮಿಕಾ ಸಮಂತಾ ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.
27 ವರ್ಷದ ನಿಲೇಶ್ ಕುಮಾರ್ ಮತ್ತು 30 ವರ್ಷದ ಅನಾಮಿಕಾ ಸಮಂತಾ ಒಂದೇ ಕೋಚಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲೇ ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇತ್ತೀಚೆಗಷ್ಟೇ ಎರಡು ಕುಟುಂಬಗಳು ಭೇಟಿಯಾಗಿ ಮದುವೆ ದಿನಾಂಕವನ್ನೂ ನಿಗದಿಪಡಿಸಿದ್ದವು.
ಕಳೆದ ವಾರವೇ ಅನಾಮಿಕಾ ಅವರ ಪೋಷಕರು ಪಶ್ಚಿಮ ಬಂಗಾಳದಿಂದ ಲಕ್ನೋ ಬಂದು ನಿಲೇಶ್ ಕುಟುಂಬವನ್ನು ಭೇಟಿಯಾಗಿದ್ದರು. ಸಣ್ಣ ಸಮಾರಂಭದಲ್ಲಿ ನಿಶ್ಚಿತಾರ್ಥ ಕೂಡ ನಡೆದಿತ್ತು. ಮುಂದಿನ ವರ್ಷ ಮದುವೆ ನಡೆಸಲು ಎರಡೂ ಕುಟುಂಬಗಳು ಸಿದ್ಧತೆ ಆರಂಭಿಸಿದ್ದವು.
ನಿಲೇಶ್‌ನ ಸಹೋದರ ಅಭಿಷೇಕ್ ಮಾತನಾಡಿ, ಅನಾಮಿಕಾ ತುಂಬಾ ಒಳ್ಳೆಯ ಹುಡುಗಿ. ನಿಶ್ಚಿತಾರ್ಥದ ಬಳಿಕ ಮದುವೆ ಸಿದ್ಧತೆಗಳು ಆರಂಭವಾಗಿದ್ದವು. ಮುಂದಿನ ವಾರ ಅನಾಮಿಕಾ ಕುಟುಂಬವನ್ನು ಭೇಟಿ ಮಾಡಲು ರೈಲು ಟಿಕೆಟ್ ಕೂಡ ಬುಕ್ ಮಾಡಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.ಇದನ್ನೂ ಓದಿ: ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ; ಭಾವಿ ಪತಿಯನ್ನು ಕೊಂದ ಕಿರಾತಕಿ ಪ್ಲ್ಯಾನ್ ಹೇಗಿತ್ತು ಗೊತ್ತಾ?
ನಿಲೇಶ್ ಈ ವರ್ಷ ಪ್ರಮೋಷನ್ ಹಾಗೂ ವೇತನ ಹೆಚ್ಚಳ ಪಡೆದಿದ್ದರು. ಮದುವೆಗಾಗಿ ಹಣ ಕೂಡಿಡುತ್ತಿದ್ದರು. ಹೊಸ ಮನೆ ನಿರ್ಮಾಣಕ್ಕೂ ಸಹಾಯ ಮಾಡುತ್ತಿದ್ದರು. ಆ ಹೊಸ ಮನೆಯಲ್ಲೇ ಮದುವೆ ಮಾಡಿಕೊಳ್ಳಬೇಕು ಎಂಬುದು ಅವರ ಕನಸಾಗಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಸೋಮವಾರ ಲಖನೌನ ಅಲಿಗಂಜ್ ಪ್ರದೇಶದ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಿಲೇಶ್ ಮತ್ತು ಅನಾಮಿಕಾ ಸೇರಿ 15 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹಲವು ವಿದ್ಯಾರ್ಥಿಗಳೂ ಸೇರಿದ್ದು, ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆ ಕನಸು ಕಟ್ಟಿದ್ದ ಜೋಡಿ ಒಂದೇ ದಿನ ಪ್ರಾಣ ಕಳೆದುಕೊಂಡಿರುವುದು ಎರಡು ಕುಟುಂಬಗಳಿಗೂ ನೋವುಂಟು ಮಾಡಿದೆ.ಇದನ್ನೂ ಓದಿ: ಉದ್ಯೋಗ ಭವನದ ಬಳಿಯ ಕಾರ್ಮಿಕ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ – 200ಕ್ಕೂ ಹೆಚ್ಚು ಟಿನ್ ಶೆಡ್‌ಗಳು ಭಸ್ಮ
