ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ (DK Shivakumar) ಅವರಿಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 13 ಶಾಸಕರು (ಓರ್ವ ಎಂ.ಎಲ್‌ಸಿ ಸೇರಿ) ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 13 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು.

ಜಿ. ಪರಮೇಶ್ವರ್ ರಾಜ್ಯದ ಡಿಸಿಎಂ ಆಗಿ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಕೆ.ಹೆಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ರೆ, ಎಂ.ಬಿ ಪಾಟೀಲ್ ಅವರು ವಿಶ್ವಗುರು ಬಸವಣ್ಣ, ಬಸವಾದಿ ಶರಣರು, ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಇನ್ನುಳಿದಂತೆ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ಶೀಘ್ರದಲ್ಲೇ ಎಲ್ಲಾ ಸಂಪುಟ ಸಚಿವರಿಗೆ ಖಾತೆ ನಿಗದಿ ಮಾಡಲಾಗುತ್ತದೆ.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು
ಪರಮೇಶ್ವರ್ (ಡಿಸಿಎಂ)
ಕೆ.ಹೆಚ್ ಮುನಿಯಪ್ಪ
ಕೆ.ಜೆ ಜಾರ್ಜ್
ಎಂ.ಬಿ ಪಾಟೀಲ್
ರಾಮಲಿಂಗಾ ರೆಡ್ಡಿ
ಸತೀಶ್ ಜಾರಕಿಹೊಳಿ
ಕೃಷ್ಣಭೈರೇಗೌಡ
ಪ್ರಿಯಾಂಕ್ ಖರ್ಗೆ
ಯು.ಟಿ ಖಾದರ್
ಈಶ್ವರ್ ಖಂಡ್ರೆ
ಯತೀಂದ್ರ ಸಿದ್ದರಾಮಯ್ಯ
ಬೈರತಿ ಸುರೇಶ್
ಶರಣ ಪ್ರಕಾಶ್ ಪಾಟೀಲ್

