ಸಿನಿಮಾ ಮಾಡಿಕೊಂಡು, ಪಬ್, ಬಾರು ಅಂತ ಸುತ್ತಾಡಿಕೊಂಡಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಗಾಗ್ಗೆ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತುವುದನ್ನೂ ಹವ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕಂಗೆಣ್ಣಿಗೆ ಗುರಿಯಾಗಿರುವ ರಾಮ್ ಗೋಪಾಲ್ ವರ್ಮಾ, ಈ ಬಾರಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮೇಲೆ ಟ್ವಿಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ದ್ರೌಪದಿ ಕುರಿತಾಗಿ ವರ್ಮಾ ಮಾಡಿರುವ ಟ್ವಿಟ್ ಭಾರೀ ವೈರಲ್ ಕೂಡ ಆಗಿದೆ.
Advertisement
ಎನ್.ಡಿ.ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಎಂದು ಘೋಷಿಸುತ್ತಿದ್ದಂತೆಯೇ ರೊಚ್ಚಗೆದ್ದ ರಾಮ್ ಗೋಪಾಲ್ ವರ್ಮಾ ‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು, ಎಲ್ಲದಕ್ಕಿಂತ ಕೌರವರು ಯಾರು” ಎಂದು ಅವಹೇಳನ ಮಾಡುವಂತೆ ಟ್ವಿಟ್ ಮಾಡಿದ್ದರು. ಈ ಟ್ವಿಟ್ ಇದೀಗ ದ್ರೌಪದಿ ಬೆಂಬಲಿಗರನ್ನು ಕೆರಳಿಸಿದೆ. ಹಾಗಾಗಿ ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ. ನಂದೇಶ್ವರ ಗೌಡ ಅವರು ಹೈದರಾಬಾದ್ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಆಂಧ್ರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಾಗುತ್ತಿವೆ. ಇದನ್ನೂ ಓದಿ : ತಮ್ಮೊಂದಿಗೆ, ನಾಯಿಗೂ ವಿಮಾನ ಟಿಕೆಟ್ ಬುಕ್ ಮಾಡಲು ಹೇಳುತ್ತಾರಂತೆ ರಶ್ಮಿಕಾ ಮಂದಣ್ಣ
Advertisement
Advertisement
ಪೊಲೀಸರಿಗೆ ಹಲವರು ದೂರು ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಮ್ ಗೋಪಾಲ್ ವರ್ಮಾ ಮತ್ತೊಂದು ಟ್ವಿಟ್ ಮಾಡಿ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ದ್ರೌಪದಿ ನನಗೆ ಇಷ್ಟವಾದ ಪಾತ್ರ. ಹಾಗಾಗಿ ನಾನು ವ್ಯಂಗ್ಯ ಮಾಡಿದೆ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರು ಕಡಿಮೆ. ಈ ಹೆಸರು ಕೇಳಿದಾಕ್ಷಣ ನನಗೆ ಮಹಾಭಾರತದ ದ್ರೌಪದಿ ನೆನಪಾದರು. ಈ ರೀತಿ ಟ್ವಿಟ್ ಮಾಡುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ’ ಎಂದಿದ್ದಾರೆ. ಆದರೆ, ದೂರು ದಾಖಲಿಸಿಕೊಂಡಿರುವ ಪೊಲೀಸರು ಯಾವ ಕ್ರಮ ತಗೆದುಕೊಳ್ಳುತ್ತಾರೋ ನೋಡಬೇಕು.