LatestMain PostNational

ಕೈಯಲ್ಲಿ ಮಚ್ಚು ಹಿಡಿದು ಫುಟ್‍ಬೋರ್ಡ್ ಮೇಲೆ ವಿದ್ಯಾರ್ಥಿ ಪುಂಡಾಟ

ಚೆನ್ನೈ: ಕೈಯಲ್ಲಿ ಮಚ್ಚು ಹಿಡಿದು ಕಾಲೇಜು ವಿದ್ಯಾರ್ಥಿಯೊಬ್ಬ (College Students) ರೈಲಿನ ಫುಟ್‍ಬೋರ್ಡ್ (FootBoard) ಮೇಲೆ ನೇತಾಡಿಕೊಂಡು ಹೋಗಿರುವ ಭಯಾನಕ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ರೈಲಿನ ಫುಟ್‍ಬೋರ್ಡ್‍ನಲ್ಲಿ ಕಾಲಿಡಲು ಜಾಗವಿಲ್ಲದಿದ್ದರೂ ವಿದ್ಯಾರ್ಥಿಗಳ ಗುಂಪಿನ ಮಧ್ಯೆ ಯುವಕನೋರ್ವ ತುದಿಯಲ್ಲಿ ನಿಂತುಕೊಂಡು ಎಡಗೈಯಲ್ಲಿ ಮಚ್ಚನ್ನು ಬೀಸುತ್ತಾ ಪುಂಡಾಟ ಮೆರೆದಿದ್ದಾನೆ. ಈ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿಬ್ಬಂದಿ ನಿರ್ಲಕ್ಷ್ಯ – 18 ಗಂಟೆಗಳ ಕಾಲ 7 ವರ್ಷದ ಬಾಲಕಿ ಕ್ಲಾಸ್‍ರೂಂನಲ್ಲೇ ಲಾಕ್

ವಿದ್ಯಾರ್ಥಿಯಲ್ಲಿ ಮಚ್ಚನ್ನು ಹಿಡಿದು ಅದನ್ನು ಫ್ಲಾಟ್‍ಫಾರ್ಮ್ (Platform) ಮೇಲೆ ಹೊಡೆಯುತ್ತಾ ಹೋಗುತ್ತಿರುತ್ತಾನೆ. ಇದೇ ವೇಳೆ ರೈಲಿನ ಕಂಪಾರ್ಟ್‍ಮೆಂಟ್‍ಗೂ (Compartment) ಕೂಡ ಹೊಡೆಯುವ ಆತನ ವರ್ತನೆಯನ್ನು ಕಂಡು ಪ್ರಯಾಣಿಕರು (Passangers) ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

ಪಚ್ಚಯ್ಯಪ್ಪ ಕಾಲೇಜು (Pachaiyappa college) ಮತ್ತು ಪ್ರೆಸಿಡೆನ್ಸಿ ಕಾಲೇಜಿನ (Presidency College) ವಿದ್ಯಾರ್ಥಿಗಳ ಅಶಿಸ್ತಿನ ವರ್ತನೆ, ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ಒಬ್ಬರಿಗೊಬ್ಬರು ಹಲ್ಲೆ ಮಾಡಿ ಪ್ರಯಾಣಿಕರಿಗೆ ತೊಂದರೆನ್ನುಂಟುಮಾಡುವ ದೃಶ್ಯಗಳನ್ನು ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರ ವಿರುದ್ಧ ಪೊಲೀಸರು ಯಾವುದೇ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ವೆಲಚೇರಿಯಿಂದ ಅರಕ್ಕೋಣಂಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ವಿದ್ಯಾರ್ಥಿಗಳು ಈ  ಹಾವಳಿ ನಡೆಸಿದ್ದಾರೆ. ಇವರು ಪಚ್ಚಯ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ಪೆರಂಬೂರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Live Tv

Leave a Reply

Your email address will not be published.

Back to top button