ಲಕ್ನೋ: ಯಾವುದಾದರೂ ಮಕ್ಕಳನ್ನು ಬಿಟ್ಟು ಹೋಗಿದ್ದೇನೆಯೇ ಎಂದು ಪರಿಶೀಲನೆ ನಡೆಸದೇ 1ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯ ತರಗತಿಯೊಳಗೆ 18 ಗಂಟೆಗಳ ಕಾಲ ಸಿಬ್ಬಂದಿ ಲಾಕ್ ಮಾಡಿ ಮನೆಗೆ ಹೋಗಿರುವ ಘಟನೆ ಉತ್ತರಪ್ರದೇಶದ (UttarPradesh) ಸಂಭಾಲ್‍ನಲ್ಲಿ (Sambhal) ನಡೆದಿದೆ.
ಬುಧವಾರ ಬೆಳಗ್ಗೆ ಶಾಲೆ ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು, ಗುನ್ನೌರ್ ತಾಹಸಿಲ್ (Gunnaur tehsil) ಪ್ರಾಥಮಿಕ ಶಾಲೆಯ 1 ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕಿ ಶಾಲಾ ಅವಧಿ ಮುಗಿದ ಬಳಿಕ ತರಗತಿಯ ಒಳಗೆಯೇ ಇದ್ದಳು. ಆದರೆ ಇಂದು ಬೆಳಗ್ಗೆ ಶಾಲೆ ತೆರೆದಾಗ ಆಕೆ ತರಗತಿಯಲ್ಲಿ ಪತ್ತೆಯಾಗಿದ್ದಾಳೆ ಮತ್ತು ಆರೋಗ್ಯವಾಗಿದ್ದಾಳೆ ಎಂದು ಶಿಕ್ಷಣಾಧಿಕಾರಿ ಪೋಪ್ ಸಿಂಗ್ (Block Education Officer Pope Singh) ತಿಳಿಸಿದ್ದಾರೆ. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು
Advertisement
Advertisement
ಮಂಗಳವಾರ ಶಾಲೆ ಮುಗಿದ ಬಳಿಕ ಮನೆಗೆ ಬಾಲಕಿ ಹಿಂತಿರುಗದೇ ಇದ್ದಾಗ, ಆಕೆಯ ಅಜ್ಜಿ ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಯಾವುದೇ ಮಕ್ಕಳಿಲ್ಲ ಎಂದು ಸಿಬ್ಬಂದಿ ಹೇಳಿದಾ ಆಕೆಯ ಚಿಕ್ಕಪ್ಪನಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಮನೆಯವರೆಲ್ಲರೂ ಅರಣ್ಯ ಪ್ರದೇಶದಲ್ಲೆಡೆ ಹುಡುಕಾಟ ನಡೆಸಿದರೂ ಎಲ್ಲಿಯೂ ಬಾಲಕಿ ಪತ್ತೆಯಾಗಲಿಲ್ಲ. ಆದರೆ ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆ ತೆರೆದಾಗ ಬಾಲಕಿ ರಾತ್ರಿಯಿಡೀ ಶಾಲಾ ಕೊಠಡಿಯಲ್ಲಿ ಬೀಗ ಹಾಕಿದ್ದರಿಂದ ತರಗತಿಯಲ್ಲಿಯೇ ಇದ್ದ ವಿಚಾರ ಬೆಳಕಿಗೆ ಬಂದಿದೆ.
Advertisement
Advertisement
ಶಾಲಾ ಅವಧಿ ಮುಗಿದರೂ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೊಠಡಿಗಳನ್ನು ಪರಿಶೀಲಿಸಿಲ್ಲ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿದ್ದಾರೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಎಲ್ಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್ – ಅಶ್ಲೀಲ ವೀಡಿಯೋ ಅಪ್ಲೋಡ್