Dakshina KannadaDistrictsKarnatakaLatestLeading NewsMain Post

SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

ಮಂಗಳೂರು: ಎನ್‍ಐಎ ಅಧಿಕಾರಿಗಳು ಇಂದು ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ಕಚೇರಿಯ ಒಳಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

ಎನ್‍ಐಎ (NIA) ಅಧಿಕಾರಿಗಳು ಎಸ್‍ಡಿಪಿಐ (SDPI) ಕಚೇರಿಯ ಬೀಗವನ್ನು ಬ್ಲೇಡ್‍ನಿಂದ ಕಟ್ ಮಾಡಿ ಕಚೇರಿಯ ಶಟರ್ ಒಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಒಳಭಾಗದ ಡೋರ್‌ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್‍ಐಎ ಅಧಿಕಾರಿಗಳು ಅಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಂಪ್ಯೂಟರ್ ಸಿಪಿಯುನ ಹಾರ್ಡ್‍ಡಿಸ್ಕ್‌ನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಎಸ್‍ಡಿಪಿಐ ರಾಜ್ಯ ಮುಖಂಡ ಮಾತನಾಡಿ, ದಾಳಿ ಮಾಡುವ ಸಂದರ್ಭದಲ್ಲಿ ಕಚೇರಿಯಲ್ಲಿ ಸಿಬ್ಬಂದಿಯಿದ್ದ. ಆತ ಎನ್‍ಐಎ ಅಧಿಕಾರಿಗಳ ಬಳಿ ಪ್ರಶ್ನಿಸುವ ಮೊದಲೇ ಕಚೇರಿಯ ಬೀಗವನ್ನು ಒಡೆದು ನುಗ್ಗಿದ್ದಾರೆ. ಒಂದು ರೀತಿಯ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಈ ರೀತಿಯ ಘಟನೆಯನ್ನು ಎಸ್‍ಡಿಪಿಐ ಖಂಡಿಸುತ್ತೇವೆ ಎಂದರು. ಇದನ್ನೂ ಓದಿ: ಕೊಪ್ಪಳದಲ್ಲಿ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಬಂಧನ

ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿದೆ. ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ಎನ್‍ಐಐ ಇತಿಹಾಸದಲ್ಲಿ ಅತಿ ದೊಡ್ಡ ದಾಳಿ ಇದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

Live Tv

Leave a Reply

Your email address will not be published.

Back to top button