ಬೆಂಗಳೂರು: ಆ.13 ರಂದು ʻಕರ್ನಾಟಕ ಬಂದ್ʼ ಘೋಷಣೆಯಾದ ಬೆನ್ನಲ್ಲೇ ತಮಿಳುನಾಡು ಸಿಎಂ ವಿಜಯ್ (CM Vijay) ಅವರ ಭೇಟಿ ಮುಂದೂಡಿಕೆಗೆ ಸಿಎಂ ಡಿಕೆ ಶಿವಕುಮಾರ್ (DK Shivakumar ಮನವಿ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡಿಸಿ ಮಾತನಾಡಿದ ಅವರು, ಇಂತಹ ವಾತಾವರಣರಲ್ಲಿ ವಿಜಯ್ ಅವರನ್ನ ಕರೆಸೋದು ಸೂಕ್ತ ಅಲ್ಲ, ನಾನು ಅವರನ್ನ ಕರೆಸೋದು, ಯಾರೋ ಕೂಗೋದು, ಮುತ್ತಿಗೆ ಹಾಕೋದು ಸರಿಯಲ್ಲ. ಕೆಲವರು ಅವರ ಭೇಟಿ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದು ಸರಿ ಇಲ್ಲ, ನನಗೇಕೋ ಸಮಾಧಾನ ತರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿಜಯ್ ಅವರು ತಾವೇ ಬರ್ತೀವಿ ಅಂತೇಳಿದ್ರು. ಈ ಹಿಂದೆ ಸ್ಟಾಲಿನ್ ಅವರೊಂದಿಗೆ ಚರ್ಚೆ ಮಾಡೋದಾಗಿ ಹೇಳಿದ್ದೆ, ಅವರು ಅನುಮತಿ ಕೊಡಲಿಲ್ಲ, ಈಗ ವಿಜಯ್ ಬರ್ತೀನಿ ಅಂದಿದ್ರು. ಸೌಹಾರ್ದಯುತವಾಗಿ ಮಾತನಾಡಲು ಬರ್ತಿದ್ರು. ಆದ್ರೆ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ನಾನು ತಮಿಳುನಾಡು ಸಿಎಂಗೆ ಮನವಿ ಮಾಡ್ತಿದ್ದೀನಿ. ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬರೋದು ಬೇಡ ಅಂತೇಳಿ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ನೀರು
ಇನ್ನೂ ಸಿಡಬ್ಲ್ಯೂಎಂಎ 4.5 ಟಿಎಂಸಿ ನೀರು ಬಿಡೋದಕ್ಕೆ ಹೇಳಿದೆ. ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
