– ಡಿಕೆಶಿ ಪೂಜೆ ವೇಳೆ ಬಲಭಾಗದ ಹೂವು ವರ
ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ.
ಅದೇ ರೀತಿ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾಕೈಂಕರ್ಯ ನರವೇರಿಸಿದ್ದ ಡಿಕೆ ಶಿವಕುಮಾರ್ ಅವರು, ಇಂದು ನಗರ ದೇವತೆ ಅಣ್ಣಮ್ಮ ದೇವಿ (Sri Annamma Devi) ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದಾರೆ. ಇದನ್ನೂ ಓದಿ: ಆಹಾರ ಸಾಕು, ಬೇರೆ ಖಾತೆ ಬೇಕು – ರಾಮಲಿಂಗಾರೆಡ್ಡಿ ಆಯ್ತು, ಈಗ ಮುನಿಯಪ್ಪ ಸರದಿ

ರಾಜ್ಯದ ಮುಖ್ಯಮಂತ್ರಿಯಾದರೆ, ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದ ಡಿಕೆಶಿ ಇಂದು ಹರಕೆ ತೀರಿಸಿದ್ದಾರೆ. ಉಪ್ಪು, ಮೊಸರು ಹಾಕಿ, ಸುಃಖ, ಶಾಂತಿ, ನೆಮ್ಮದಿ ನೀಡುವಂತೆ ಪ್ರಾರ್ಥಿಸಿದ್ದಾರೆ. ತಾಯಿ ಅಣ್ಣಮಗೆ ನಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಸಿಲು ಮಾರಮ್ಮನಿಗೂ ಉಪ್ಪು, ಮೊಸರು ಹಾಕಿ ನಮಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ಪರೋಕ್ಷವಾಗಿ ಖಾತೆ ಬಿಟ್ಟುಕೊಡಲ್ಲ ಎಂದ ಕೃಷ್ಣಬೈರೇಗೌಡ

ಸಿಎಂ ಡಿಕೆಶಿಗೆ ಶುಭಸೂಚನೆ
ಇನ್ನೂ ಹರಕೆ ಪೂಜೆ ವೇಳೆ ಅಣ್ಣಮ್ಮದೇವಿ ದೇವಸ್ಥಾನದಲ್ಲಿ ಸಿಎಂಗೆ ಬಲಭಾಗದ ಹೂವು ಬಿದ್ದಿದ್ದೆ ಎಂದು ತಿಳಿದುಬಂದಿದೆ. ಸಿಎಂ ಖುದ್ದು ಪೂಜೆ ಸಲ್ಲಿಸುವ ವೇಳೆ ಬಲಬದಿಯಿಂದ ಮಲ್ಲಿಗೆ ಹೂವು ಬಿದ್ದಿದೆ. ಈ ಹೂವನ್ನು ಅರ್ಚಕರು ಸಿಎಂ ಕೈಗೆ ನೀಡಿದ್ದಾರೆ. ಅಲ್ಲದೇ ಇದು ಇಷ್ಟಾರ್ಥ ಈಡೇರುವ ನಂಬಿಕೆಯೂ ಆಗಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಿಂಗಾರೆಡ್ಡಿ ನನ್ನ ಆಪ್ತ ಸ್ನೇಹಿತರು, ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ: ಡಿಕೆಶಿ
