ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 2026ರ ಯುಜಿಸಿ-ನೆಟ್ (UGC-NET) ಪರೀಕ್ಷೆಯ 84 ವಿಷಯಗಳ ಪ್ರೊವಿಷನಲ್ ಕೀ ಉತ್ತರಗಳನ್ನು (Provisional Answer Keys) ಭಾನುವಾರ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ಪ್ರಶ್ನಿಸಲು ಅವಕಾಶ ಕಲ್ಪಿಸಲಾಗಿದ್ದು, ಆಗಸ್ಟ್ 16 ರಿಂದ ಆಗಸ್ಟ್ 18ರ ರಾತ್ರಿ 11:59 ರವರೆಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ಅಭ್ಯರ್ಥಿಗಳು ಪ್ರಶ್ನಿಸುವ ಪ್ರತಿ ಪ್ರಶ್ನೆಗೆ 200 ರೂ. ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿಗೆ ಆಗಸ್ಟ್ 18ರ ರಾತ್ರಿ 11:59 ಕೊನೆಯ ಸಮಯವಾಗಿದೆ.
ಉಳಿದ ಮೂರು ಪ್ರಮುಖ ವಿಷಯಗಳಾದ ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳ ಕುರಿತು ಬಂದ ದೂರುಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಾರ್ವಜನಿಕ ಪ್ರಕಟಣೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಾನೊಬ್ಬ ದಿಮಾಗಿ ನಕ್ಸಲ್, ನನಗೆ ಹೆಮ್ಮೆಯಿದೆ – ಮೋದಿಗೆ ಚಿದಂಬರಂ ತಿರುಗೇಟು
ಅಭ್ಯರ್ಥಿಗಳು ಕೇವಲ ಅಧಿಕೃತ ಎನ್‌ಟಿಎ ವೆಬ್‌ಸೈಟ್ ಮತ್ತು ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಸೂಚಿಸಲಾಗಿದೆ.
ಜಂಟಿ ಸಿಎಸ್‌ಐಆರ್ ಯುಜಿಸಿ-ನೆಟ್ ಜೂನ್ 2026 ಪರೀಕ್ಷೆಯ ಅಭ್ಯರ್ಥಿಗಳಿಗೂ ಪ್ರೊವಿಷನಲ್ ಕೀ ಉತ್ತರಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ವಿಂಡೋ ಲಭ್ಯವಾಗಿದ್ದು, ಆಗಸ್ಟ್ 16 ರಿಂದ 18ರ ರಾತ್ರಿ 11:00 ಗಂಟೆಯೊಳಗೆ ಅಧಿಕೃತ ಪೋರ್ಟಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ಅರ್ಹತೆ, ಕಿರಿಯ ಸಂಶೋಧನಾ ಫೆಲೋಶಿಪ್ (JRF) ಹಾಗೂ ಪಿಎಚ್‌ಡಿ (PhD) ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

