ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೇಳಿಕೆಗೆ ತಿರುಗೇಟು ಎನ್ನುವಂತೆ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ(P Chidambaram) ಅವರು ನಾನು ದಿಮಾಗಿ ನಕ್ಸಲ್ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ನಾನು ದಿಮಾಗಿ ನಕ್ಸಲ್(Dimagi Naxal) ಎಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ಬರೆದಿದ್ದಾರೆ.
I am proud to be a dimagi naxal !
— P. Chidambaram (@PChidambaram_IN) August 16, 2026
ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ(Independence Day Speech) ಕೆಂಪುಕೋಟೆಯಿಂದ ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಮುಗಿದಿದೆ ಎಂದು ಹೇಳುತ್ತಲೇ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ದಿಮಾಗಿ ನಕ್ಸಲ್ (ಬೌದ್ಧಿಕ ಅಥವಾ ಮನಸ್ಥಿತಿಯ ನಕ್ಸಲ್) ಎಂಬ ಹೊಸ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದರು.
2014 ರಿಂದ ನಾವು ಅಧಿಕಾರಕ್ಕೆ ಏರಿದ ಬಳಿಕ ದೇಶವನ್ನು ನಕ್ಸಲ್ ಹಿಂಸೆಯಿಂದ ಮುಕ್ತಗೊಳಿಸುವ ಸಂಕಲ್ಪ ಮಾಡಲಾಗಿತ್ತು. ಇಂದು ಕಾಡುಗಳಲ್ಲಿ ಬಂದೂಕು ಹಿಡಿದು ನಡೆಸುತ್ತಿದ್ದ ನಕ್ಸಲ್ ಹಿಂಸಾಚಾರವು ಕೊನೆಗೊಳ್ಳುವ ಹಂತದಲ್ಲಿದೆ. ಆದರೆ ಈಗ ನೇರ ಶಸ್ತ್ರಾಸ್ತ್ರ ಹೋರಾಟದ ಬದಲಿಗೆ ನಕ್ಸಲ್ ಅಥವಾ ಮಾವೋವಾದಿ ಮನಸ್ಥಿತಿ ಹೊಂದಿರುವ ಕೆಲವರು ವ್ಯವಸ್ಥೆಯೊಳಗೆ, ಅಧಿಕಾರದ ಕಾರಿಡಾರ್‌ಗಳಲ್ಲಿ ಮತ್ತು ಸರ್ಕಾರದ ಸಮಿತಿಗಳಲ್ಲಿ ನೆಲೆಸಿ ನೀತಿ ನಿರೂಪಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಝೆನ್ ಜೀಗಳಿಗೆ ಮೋದಿ ಬಿಗ್ ಗಿಫ್ಟ್ – ದೇಶದ 1 ಕೋಟಿ ಯುವಜನರಿಗೆ ಎಐ ತರಬೇತಿ
VIDEO | Independence Day 2026: Addressing the nation from ramparts of Red Fort, PM Modi, says, “For years, people with a Maoist ideology had established themselves in the corridors of power and influenced policymaking, including as advisers on government committees. We have… pic.twitter.com/mUquszPwYY
— Press Trust of India (@PTI_News) August 15, 2026
ಯಾರಿದು ದಿಮಾಗಿ ನಕ್ಸಲ್?
ದಿಮಾಗಿ ನಕ್ಸಲ್ ಎಂದರೆ ಬೌದ್ಧಿಕ ಅಥವಾ ವಿಚಾರವಾದಿ ನೆಲೆಗಟ್ಟಿನಲ್ಲಿ ನಕ್ಸಲ್ ಅಥವಾ ಮಾವೋವಾದಿ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳು ಎಂದರ್ಥ. ಕನ್ನಡದಲ್ಲಿ ಇದನ್ನು ‘ಬೌದ್ಧಿಕ ನಕ್ಸಲ್’ ಅಥವಾ ‘ಮನಸ್ಸಿನಲ್ಲಿ ನಕ್ಸಲ್ ಭಾವನೆ ಹೊಂದಿರುವ ವ್ಯಕ್ತಿಗಳುʼಎಂದು ಕರೆಯಬಹುದು. ಇದನ್ನೂ ಓದಿ: ಮಾಡೆಲ್‌ಗಳಾದ ಬುಡಕಟ್ಟು ಸುಂದರಿಯರು – ಮಾಜಿ ನಕ್ಸಲ್ ಮಹಿಳೆಯರ ರ‍್ಯಾಂಪ್ ವಾಕ್ ವೈರಲ್
