ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ರೀಲ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ (PM Modi reel)ಗಮನ ಸೆಳೆಯುತ್ತಿದೆ. ಪ್ರಾಣಿಗಳು ಮತ್ತು ಪಕ್ಷಿಗಳೊಂದಿಗೆ ಸಮಯ ಕಳೆಯುವ ಹಾಗೂ ಅವುಗಳಿಗೆ ಆಹಾರ ನೀಡುವ ವಿಡಿಯೋವನ್ನು ಮೋದಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೋದಿ ಅವರು ತಮ್ಮ ನಿವಾಸದಲ್ಲಿ ಸಾಕಿರುವ ಆಕಳು ಮತ್ತು ನವಿಲುಗಳಿಗೆ ತಮ್ಮ ಕೈಯಾರೆ ಹುಲ್ಲು ಮತ್ತು ಕಾಳುಗಳನ್ನು ತಿನ್ನಿಸುತ್ತಿರುವುದು ಕಂಡುಬರುತ್ತದೆ. ಪ್ರಾಣಿಗಳೊಂದಿಗೆ ಅವರು ಆತ್ಮೀಯವಾಗಿ ಸಮಯ ಕಳೆಯುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.
ಈ ವಿಡಿಯೋಗೆ ಮೋದಿ ಅವರು Special, as always..! ಎಂದು ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ ತಮ್ಮ ದಿನಚರಿಯಲ್ಲಿರುವ ಈ ಮುದ್ದಾದ ಕ್ಷಣದ ಬಗ್ಗೆಯೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ: CJI ಸೂರ್ಯಕಾಂತ್ ಟೀಕೆ ಬಳಿಕ BCI ಯೂಟರ್ನ್; NALSAR ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧ ವಾಪಸ್
ಪ್ರತಿದಿನ ಬೆಳಿಗ್ಗೆ ನನ್ನ ಸ್ನೇಹಿತರಿಗೆ ಊಟ ಹಾಕುವುದು ನನ್ನ ದಿನಚರಿ. ನಿನ್ನೆ ಬೆಳಿಗ್ಗೆ ನಾನು ಬೇಗನೆ ಹೊರಡುತ್ತಿದ್ದೇನೆಂದು ಅವರಿಗೆ ಹೇಗೋ ಗೊತ್ತಾಯಿತು. ಹಾಗಾಗಿ ಕೆಂಪುಕೋಟೆಗೆ ತೆರಳುವ ಮುನ್ನ ಅವುಗಳು ನನ್ನನ್ನು ಭೇಟಿಯಾಗಲು ಬಂದವು. ಯಾವಾಗಲೂ ವಿಶೇಷ! ಎಂದು ಮೋದಿ ಬರೆದುಕೊಂಡಿದ್ದಾರೆ.
View this post on Instagram
ಮೋದಿ ಅವರು ಈ ರೀಲ್ ಮೂಲಕ ತಮ್ಮ ದಿನನಿತ್ಯದ ಜೀವನದ ಮತ್ತೊಂದು ಸರಳ ಹಾಗೂ ಮುದ್ದಾದ ಕ್ಷಣವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ದೇಶದ ಪ್ರಧಾನಿಯಾಗಿದ್ದರೂ ಪ್ರಾಣಿಗಳೊಂದಿಗೆ ಇಷ್ಟು ಸರಳವಾಗಿ ಬೆರೆಯುವ ಮೋದಿ ಅವರ ಸ್ವಭಾವ ಈ ವಿಡಿಯೋದಲ್ಲಿ ಕಾಣಿಸುತ್ತಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಕ್ಯೂಟ್ ಮೂಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ: ವಾರಣಾಸಿ ಏರ್‌ಫೋರ್ಟ್ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಏರ್ ಇಂಡಿಯಾ ಪ್ರಯಾಣಿಕನಿಂದ ಗುಂಡಿನ ದಾಳಿ
