– ಮಾಜಿ ಸಿಎಂ ಅಭಿನಂದಿಸಿದ ಸಿಎಂ ಪತ್ನಿ ಉಷಾ, ಸಹೋದರ ಡಿಕೆಸು
ಬೆಂಗಳೂರು: ಸಿಎಂ ಆಗಿ ತಿಂಗಳು ಪೂರ್ಣಗೊಂಡ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕುಟಂಬ ಸಮೇತರಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿ, ಉಪಹಾರದ ಜೊತೆ ಮಾತುಕತೆ ನಡೆಸಿದರು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಅಂಗವಾಗಿ ಇಂದು ಕುಟುಂಬದೊಂದಿಗೆ ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು, ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು.
ಶ್ರೀ ಸಿದ್ದರಾಮಯ್ಯನವರ ದೂರದೃಷ್ಟಿಯ ನಾಯಕತ್ವ, ಅಪಾರ ಆಡಳಿತ ಅನುಭವ ಹಾಗೂ ನಾಡಿನ ಜನರ ಅಭಿವೃದ್ಧಿಯತ್ತ ಅವರ… pic.twitter.com/1rKlgLSm1u
— DK Shivakumar (@DKShivakumar) July 3, 2026
ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್, ಪತ್ನಿ ಉಷಾ ಹಾಗೂ ಸಹೋದರ ಡಿಕೆ ಸುರೇಶ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆಸು ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಒಟ್ಟಿಗೆ ಉಪಹಾರ ಕೂಟ ನಡೆಸಿದ್ದಾರೆ. ಈ ವೇಳೆ ಡಿಕೆಶಿ ಪತ್ನಿ ಉಷಾ ಹಾಗೂ ಡಿಕೆಶಿ ಅವರು ಉಡುಗೊರೆಗಳನ್ನು ಕೊಟ್ಟು ಅಭಿನಂದಿಸಿದ್ದಾರೆ.ಇದನ್ನೂ ಓದಿ: ತಾಕತ್ ಇದ್ರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ: ಸಿಎಂಗೆ ಆರ್.ಅಶೋಕ್ ಸವಾಲ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ತಮ್ಮ ಪತ್ನಿ ಶ್ರೀಮತಿ ಉಷಾ ಹಾಗೂ ಸಹೋದರ ಡಿ.ಕೆ. ಸುರೇಶ್ ಅವರ ಜೊತೆ ನನ್ನ ಮನೆಗೆ ಆಗಮಿಸಿ, ಉಪಾಹಾರ ಸೇವಿಸುತ್ತಾ ಮಾತುಕತೆ ನಡೆಸಿದರು. @DKShivakumar pic.twitter.com/pt2omduR2D
— Siddaramaiah (@siddaramaiah) July 3, 2026
ಈ ಮೂಲಕ ಸುಲಲಿತವಾಗಿ ಅಧಿಕಾರ ಹಸ್ತಾಂತರ ಮಾಡಿಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸದಾ ಉತ್ತಮ ಬಾಂಧವ್ಯದ ಸಂದೇಶವನ್ನು ನೀಡಿ, ಡಿಕೆಶಿ ಒಗ್ಗಟ್ಟನ್ನು ತೋರ್ಪಡಿಸಿದ್ದಾರೆ.
