Connect with us

Districts

ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ- ನಾಲ್ವರಿಗೆ ಗಾಯ

Published

on

ಹಾಸನ: ಕ್ಷುಲ್ಲಕ ಕಾರಣದಿಂದ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಬೇಲೂರು ತಾಲೂಕಿನ ಸಾಣೇನಹಳ್ಳಿಯ ಎರಡು ಕೋಮುಗಳ ಗುಂಪುಗಳ ನಡುವೆ ಈ ಮಾರಾಮಾರಿ ನಡೆದಿದೆ. ಹಣಕಾಸು ವಿಚಾರದಲ್ಲಿ ಆರಂಭವಾದ ಜಗಳ ಕೈಕೈಮಿಲಾಯಿಸುವ ಹಂತಕ್ಕೆ ಬೆಳೆದಿದೆ. ಗ್ರಾಮದ ನವೀನ್, ಪೂರ್ಣೇಶ್, ಚಂದ್ರಯ್ಯ ಹಾಗೂ ಭದ್ರಯ್ಯ ಗಾಯಗೊಂಡಿದ್ದು ಸದ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದ ಪೊಲೀಸರ ಮುಂದೆ ಎರಡು ಗುಂಪುಗಳು ಮತ್ತೆ ಹೊಡೆದಾಡಲು ಮುಂದಾಗಿದ್ದರು. ತಕ್ಷಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ರು.

Click to comment

Leave a Reply

Your email address will not be published. Required fields are marked *