ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಅವರು ಅಂಜನಾದ್ರಿಗೆ (Anjanadri Hills) ತೆರಳಿ ಹನುಮನ ದರ್ಶನ ಪಡೆದರು.
ಪತ್ನಿ ಜೊತೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ ರಾಹುಲ್ ದ್ರಾವಿಡ್, 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದನ್ನೂ ಓದಿ: ಮುಂಬೈ ತೊರೆದು ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್
ಬುಧವಾರ ಹಂಪಿಗೆ ತೆರಳಿ ವಿರೂಪಾಕ್ಷನ ದರ್ಶನ ಪಡೆದಿದ್ದರು. ಅದಕ್ಕೂ ಮೊದಲು ಅವರು ಸಾಸಿವೆಕಾಳು ಗಣೇಶ, ಹೇಮಕೂಟಕ್ಕೆ ತೆರಳಿದ್ದರು.
ನಂತರ ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ದರ್ಶನ ಪಡೆದರು. ಮಧ್ಯಾಹ್ನದ ಬಳಿಕ ಚಕ್ರತೀರ್ಥ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ, ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ವಿಶ್ವಕಪ್ ಸೋಲಿನ ನಡುವೆ ಮತ್ತೆ ಹರ್ಮನ್ ಹೆಗಲಿಗೆ ನಾಯಕಿ ಪಟ್ಟ – ಏಷ್ಯನ್ ಗೇಮ್ಸ್‌ಗೆ ಭಾರತ ಮಹಿಳಾ ತಂಡ ಪ್ರಕಟ
