Crime
ಮದ್ಯ ಸೇವನೆ ವೇಳೆ ಸ್ನ್ಯಾಕ್ಸ್ ಬೇಡವೆಂದ ಬಾಲಕನನ್ನು ಕೊಂದೇ ಬಿಟ್ಟ!

ನವದೆಹಲಿ: ಮದ್ಯ ಸೇವಿಸುತ್ತಿದ್ದ ವೇಳೆ ವ್ಯಕ್ತಿ 14 ವರ್ಷದ ಬಾಲಕನಿಗೆ ಸ್ನ್ಯಾಕ್ಸ್ ನೀಡಿದ್ದು, ಈ ವೇಳೆ ಬಾಲಕ ಬೇಡ ಎಂದು ಹೇಳಿದ್ದಾನೆ. ಇಷ್ಟಕ್ಕೇ ಕೋಪಿತನಾದ ಕುಡುಕ ಬಾಲಕನಿಗೆ ಇರಿದು ಕೊಲೆ ಮಾಡಿದ್ದಾನೆ.
ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಘಟನೆ ನಡೆದಿದ್ದು, 20ರ ಹರೆಯದ ಶಾದಾಬ್ 14 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾನೆ. ಯಾವುದೋ ಕೆಲಸಕ್ಕೆ ಹೊರಟಿದ್ದ ಬಾಲಕನನ್ನು ಕರೆದು ಸ್ನ್ಯಾಕ್ಸ್ ನೀಡಿದ್ದಾನೆ. ಬಾಲಕ ಬೇಡ ಎಂದು ಹೇಳಿದ್ದಾನೆ. ಇಷ್ಟಕ್ಕೇ ಬಾಲಕನನ್ನು ಇರಿದು ಕುಡುಕ ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಆಗ್ನೇಯ ದೆಹಲಿ ಡಿಸಿಪಿ ಆರ್.ಪಿ.ಮೀನಾ ಮಾಹಿತಿ ನೀಡಿದ್ದು, 14 ವರ್ಷದ ಬಾಲಕನನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಕುರಿತು ಬುಧವಾರ ಮಾಹಿತಿ ಲಭಿಸಿತು. ಬಳಿಕ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು. ಬಾಲಕನ ದೇಹವನ್ನು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಹೋಗಿ ನೋಡಿದಾಗ ದೇಹದಲ್ಲಿ ಹಲವು ಗಾಯಗಳಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ವಿಚಾರಣೆ ನಡೆಸುವಾಗ ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನಿಡಿದ್ದು, ಮದನ್ಪುರ್ ಖಾದರ್ ಎಕ್ಸ್ಟೆನ್ಷನ್ ನಿವಾಸಿ ಶಾದಾಬ್ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಿಂದಿ ಕುಂಜ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.
20ರ ಹರೆಯದ ಶಾದಾಬ್ನನ್ನು ಬಂಧಿಸಲಾಗಿದೆ. ಬಾಲಕ ಯಾವುದೋ ಕೆಲಸಕ್ಕೆ ಹೊರಟಿದ್ದ ವೇಳೆ ಕುಡುಕ ಆರೋಪಿ ತಡೆದಿದ್ದಾನೆ. ಈ ವೇಳೆ ಸ್ನ್ಯಾಕ್ಸ್ ತಗೋ ಎಂದು ಬಾಲಕನಿಗೆ ಹೇಳಿದ್ದಾನೆ. ಆದರೆ ಬಾಲಕ ಬೇಡ ಎಂದು ಹೇಳಿದ್ದಾನೆ. ಈ ವೇಳೆ ಹಲ್ಲೆ ನಡೆಸಿ, ಹರಿತವಾದ ವಸ್ತುವಿಂದ ಇರಿದಿದ್ದಾನೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
