ಚಿಕನ್ (Chicken) ಎಂದರೆ ಯಾವ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರೂರಲ್ಲ? ಅದರಲ್ಲೂ ಒಬ್ಬೊಬ್ಬರು ಬೇರೆ ಬೇರೆ ರೀತಿಯಲ್ಲಿ ಮೂಡುವ ಚಿಕನ್ ರೆಸಿಪಿಯನ್ನು ಇಷ್ಟಪಡುತ್ತಾರೆ. ಅದರಲ್ಲಿ ಚಿಕನ್ ಚಾಪ್ಸ್ (Chicken Chops) ಕೂಡಾ ಒಂದು. ಇದರ ಅಭಿಮಾನಿಗಳು ಸಾಕಷ್ಟಿದ್ದಾರೆ. ನಾವಿಂದು ರುಚಿಕರವಾದ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಇದನ್ನು ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಮಸಾಲೆ ರುಬ್ಬಲು:
ಬೆಳ್ಳುಳ್ಳಿ – 15-20
ಶುಂಠಿ – 2 ಇಂಚು
ಹಸಿರು ಮೆಣಸಿನಕಾಯಿ – 8-10
ಹೆಚ್ಚಿದ ಈರುಳ್ಳಿ – ಅರ್ಧ ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಹೆಚ್ಚಿದ ಪುದೀನ – ಮುಕ್ಕಾಲು ಕಪ್
ದಾಲ್ಚಿನ್ನಿ – 2 ಇಂಚು
ಲವಂಗ – 8
ಕಾಳುಮೆಣಸು – 1 ಟೀಸ್ಪೂನ್
ಕೊತ್ತಂಬರಿ ಪುಡಿ – 2 ಟೀಸ್ಪೂನ್
ತುರಿದ ತೆಂಗಿನಕಾಯಿ – 2-3 ಟೀಸ್ಪೂನ್
ಬೇಯಿಸಲು:
ಚಿಕನ್ ಚಾಪ್ಸ್ ತುಂಡುಗಳು – 3/4 ಕೆಜಿ
ಹೆಚ್ಚಿದ ಈರುಳ್ಳಿ – 1 ಕಪ್
ಹೆಚ್ಚಿದ ಟೊಮೆಟೊ – ಅರ್ಧ ಕಪ್
ನಿಂಬೆ ಹಣ್ಣು – ಅರ್ಧ
ಎಣ್ಣೆ – 3 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕೇರಳ ಶೈಲಿಯ ರುಚಿಕರ ಸಿಗಡಿ ರೋಸ್ಟ್ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಿಕ್ಸರ್ ಗ್ರೈಂಡರ್‌ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ದಾಲ್ಚಿನ್ನಿ, ಲವಂಗ, ಕಾಳುಮೆಣಸು, ಕೊತ್ತಂಬರಿ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ ನಯವಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ.
* ಈಗ ಒಂದು ಕಡಾಯಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
* ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
* ಈಗ ಚಿಕನ್ ತುಂಡುಗಳನ್ನು ಹಾಕಿ, ಉಪ್ಪು ಸೇರಿಸಿ ಫ್ರೈ ಮಾಡಿ.
* ಮೊದಲೇ ರುಬ್ಬಿ ಇಟ್ಟುಕೊಂಡಿದ್ದ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಚಿಕನ್ ಚೆನ್ನಾಗಿ ಬೆಂದ ಬಳಿಕ ನಿಂಬೆ ರಸವನ್ನು ಹಾಕಿ, ತಕ್ಷಣ ಸ್ಟೌ ಆಫ್ ಮಾಡಿ ಮಿಕ್ಸ್ ಮಾಡಿ.
* ಇದೀಗ ರುಚಿಕರವಾದ ಚಿಕನ್ ಚಾಪ್ಸ್ ತಯಾರಾಗಿದ್ದು, ಇದನ್ನು ರೋಟಿ, ಚಪಾತಿ ಅಥವಾ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಸರಳವಾಗಿ ಮಾಡಿ ಮಟನ್ ಮಸಾಲಾ