ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿಗಳು ಅಥವಾ ಇತರ ಪ್ರಮುಖ ವ್ಯಕ್ತಿಗಳು ವಿದೇಶ ಪ್ರವಾಸ ಕೈಗೊಳ್ಳುವಾಗ ಅವರಿಗೆ ರಾಜಕೀಯ ಅನುಮತಿ ನೀಡುವ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಶೀಲಿಸುತ್ತದೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಬಂಪರ್ ಗಿಫ್ಟ್ – 1.28 ಲಕ್ಷ ಚಿನ್ನದ ಉಂಗುರ ಸಿದ್ಧಪಡಿಸಲು ಸಿಎಂ ವಿಜಯ್ ಆದೇಶ
ಪ್ರವಾಸದ ಉದ್ದೇಶ ಮತ್ತು ಕಾರ್ಯಕ್ರಮಗಳು ಅವರು ಹೊಂದಿರುವ ಉನ್ನತ ಹುದ್ದೆಗೆ ಸೂಕ್ತವಾಗಿರಬೇಕು. ಆದರೆ, ತೆಲಂಗಾಣ ಸಿಎಂ ಅವರ ವಿಷಯದಲ್ಲಿ ಸದ್ಯಕ್ಕೆ ಪ್ರವಾಸ ಸರಿಯಾದ ಸಮಯವಲ್ಲ. ಹಾಗಾಗಿ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಎಂಇಎ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ. ಇನ್ನೊಂದೆಡೆ, ದೇಶ ವಿರೋಧಿ ಶಕ್ತಿಗಳ ಭೇಟಿಗೆ ರೇವಂತ್ ಮುಂದಾಗಿರೋದ್ರಿಂದ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ ಅಂತ ಬಿಜೆಪಿ (BJP) ಸಮರ್ಥಿಸಿಕೊಂಡಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ (Congress) ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ತಮಗೆ ಬೇಕಾದ ವ್ಯಕ್ತಿಗಳನ್ನ ಮಾತ್ರ ಕೇಂದ್ರ, ಅಮೆರಿಕಕ್ಕೆ ಬಿಡುತ್ತೆ. ಈ ರೀತಿಯಾಗಿ ಅನುಮತಿ ನೀಡದೇ ಇರೋದು ಅನ್ಯಾಯ, ಈ ರೀತಿಯಾದ ವರ್ತನೆಯನ್ನ ನಾನು ಖಂಡಿಸುತ್ತೇನೆ ಅಂದಿದ್ದಾರೆ. ಅಂದಹಾಗೆ, ಸಿಎಂ ರೇವಂತ್ ರೆಡ್ಡಿ ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ನ್ಯೂಯಾರ್ಕ್ ಮೇಯರ್, ಭಾರತೀಯ ಸಂಜಾತ ಮಮ್ದಾನಿಯನ್ನು ಭೇಟಿಯಾಗಲು ಉದ್ದೇಶಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹೊಸ ಸಿಮ್ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

