-ಸಜಾ ಕೈದಿ ಇನ್ನೂ ನಾಪತ್ತೆ
ಬೆಂಗಳೂರು: ಸುಪ್ರೀಂಕೋರ್ಟ್ (Supreme Court) ನೀಡಿದ್ದ ಆದೇಶವನ್ನೇ ನಕಲಿ ಮಾಡಿ, ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿಸಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಸಜಾ ಕೈದಿ ಶಂಕರ್.ಎ ಬಿಡುಗಡೆ ಮಾಡಿಸಿದ್ದ ಶ್ರೀಕಾಂತ್.ಎಸ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಕಲಿ ಸುಪ್ರೀಂ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ – 8 ವರ್ಷಗಳ ಬಳಿಕ ಖದೀಮನ ಕೃತ್ಯ ಬಯಲು
2004ರಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಶಂಕರ್ಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಇದೇ ವೇಳೆ ಕೇಂದ್ರ ಕಾರಾಗೃಹದ ಕನ್ವಿಕ್ಟ್ ವಿಭಾಗದಲ್ಲಿ ಎಸ್ಡಿಎ ಆಗಿದ್ದ ಶ್ರೀಕಾಂತ್ 2018ರ ನ.2ರಂದು ಸುಪ್ರೀಂ ಕೋರ್ಟ್ ಬಿಡುಗಡೆ ಆದೇಶ ನೀಡಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದ. ಇದನ್ನು ಬಳಸಿಕೊಂಡು 2018ರ ನ.13ರಂದು ಸಜಾ ಕೈದಿ ಶಂಕರ್ ರಿಲೀಸ್ ಆಗಿದ್ದ. ಆದರೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲೂ ಈತನ ಶಿಕ್ಷೆ ರದ್ದಾಗಿರಲಿಲ್ಲ ಎಂದು ತಿಳಿದುಬಂದಿದೆ.
ಸದ್ಯ ಶಂಕರ್ ಪತ್ನಿಯನ್ನು ವಿಚಾರಣೆ ನಡೆಸಿದಾಗ ಅಂದಿನ ಚೀಫ್ ಸೂಪರಿಂಟೆಂಡೆಂಟ್ ಸಹಾಯ ಮಾಡಿದ್ದರೆಂದು ಹೇಳಿಕೆ ನೀಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಗದಗ | ಶಾಲಾ ಮೇಲ್ಚಾವಣಿ ಕುಸಿತ – ಅದೃಷ್ಟವಶಾತ್ ವಿದ್ಯಾರ್ಥಿಗಳು ಪಾರು
ಏನಿದು ಪ್ರಕರಣ?
ತಮಿಳುನಾಡು (Tamil Nadu) ಮೂಲದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿ ಶಂಕರ್ ಆರ್ಮುಗಮ್ ಎಂಬಾತನ ಧೈರ್ಯ ಹಾಗೂ ವಂಚನೆಯ ಕಥೆ ಕೇಳಿ ಸ್ವತಃ ಪೊಲೀಸ್ ಇಲಾಖೆಯೇ ಈಗ ಬೆಚ್ಚಿಬಿದ್ದಿದೆ. ಈ ಮಹಾ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ (ನಕಲು) ಮತ್ತು ವಂಚನೆ ಕಾಯ್ದೆಯಡಿ ಈಗ ಎಫ್ಐಆರ್ ದಾಖಲಾಗಿದೆ
ಇಡೀ ಹಗರಣದ ಹಿನ್ನೆಲೆ ನೋಡುವುದಾದರೆ, 2001ರಲ್ಲಿ ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್, ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್ನನ್ನು ಅಪರಾಧಿ ಎಂದು ಘೋಷಿಸಿತ್ತು.ಇದನ್ನೂ ಓದಿ:ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಪುತ್ರ ರಾಜೇಂದ್ರ ತೀವ್ರ ಅಸಮಾಧಾನ: ಕಾಂಗ್ರೆಸ್ಗೆ ನೇರ ಎಚ್ಚರಿಕೆ
ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಬಿಡುಗಡೆಯಾಗಲು ಸಿನಿಮೀಯ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ. ತನಗೆ ಸುಪ್ರೀಂ ಕೋರ್ಟ್ನಿಂದ ಬಿಡುಗಡೆ ಆದೇಶ ಸಿಕ್ಕಿದೆ ಎಂದು ಬಿಂಬಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮುದ್ರೆ ಹಾಗೂ ಸಹಿ ಇರುವ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ.
ನವೆಂಬರ್ 13, 2018ರಂದು ಈ ನಕಲಿ ಆದೇಶ ಪತ್ರದೊಂದಿಗೆ 10 ಸಾವಿರ ದಂಡ ರೂ.ವನ್ನು ಶಂಕರ್ ಕಡೆಯುವರು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪಾವತಿಸಿದ್ದರು. ಸುಪ್ರೀಂ ಆದೇಶ ಪತ್ರ ಸಲ್ಲಿಕೆಯಾದ ಕಾರಣ ಶಂಕರ್ ಆರ್ಮುಗಮ್ ರಾಜಾರೋಷವಾಗಿ ಜೈಲಿನಿಂದ ಬಿಡುಗಡೆಯಾಗಿ ಪರಾರಿಯಾಗಿದ್ದ.ಇದನ್ನೂ ಓದಿ: ಜೈಲಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್ನ ಸೀಕ್ರೆಟ್ ಬಯಲು – 7 ಜನರ ವಿರುದ್ಧ FIR
ಈಗ ಬೆಳಕಿಗೆ ಬಂದಿದ್ದು ಹೇಗೆ?
ಅಧಿಕಾರಿಗಳ ಕಣ್ಣು ತಪ್ಪಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಶಂಕರ್ ಕಥೆ ಸುಖಾಂತ್ಯ ಕಂಡಿತು ಎನ್ನುವಾಗಲೇ ಟ್ವಿಸ್ಟ್ ಸಿಕ್ಕಿದೆ. ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ (DG) ಒಂದು ಆಘಾತಕಾರಿ ಅನಾಮಧೇಯ ಪತ್ರ ಬಂದಿತ್ತು. ಆ ಪತ್ರದಲ್ಲಿ ಶಂಕರ್ ನಕಲಿ ದಾಖಲೆ ನೀಡಿ ಓಡಿಹೋಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.
ಈ ಅನಾಮಧೇಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ಸುಪ್ರೀಂ ಕೋರ್ಟ್ನಿಂದ ಅಂತಹ ಯಾವುದೇ ಬಿಡುಗಡೆ ಆದೇಶ ಬಂದೇ ಇಲ್ಲ, ಶಂಕರ್ ಸಲ್ಲಿಸಿದ್ದು ನಕಲಿ ಪತ್ರ ಎಂಬ ಕಹಿ ಸತ್ಯ ಹೊರಬಿದ್ದಿದೆ.ಇದನ್ನೂ ಓದಿ: ಅಕ್ರಮದ ಹಣದಲ್ಲಿ ಸ್ನೇಹಿತೆಗೆ ಜ್ಯುವೆಲ್ಲರಿ ಕೊಡಿಸಿದ್ದ ಗ್ಯಾನೇಂದ್ರ – 26 ಲಕ್ಷ ಮೌಲ್ಯದ ಚಿನ್ನಾಭರಣ ಗಿಫ್ಟ್

